ಪೋಸ್ಟ್‌ಗಳು

ಜೂನ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸೋಮವಾರ ಯಾವ ಸ್ಟಾಕ್ ಖರೀದಿಸಲಿದ್ದೀರಿ?

ಭಾರತೀಯ ಷೇರು ಮಾರುಕಟ್ಟೆ ಹೊಸ ದಾಖಲೆ ಬರೆಯುತ್ತಿದೆ. ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿರುವ ಭಾರತದ ಷೇರು ಮಾರುಕಟ್ಟೆಯ ಸೂಚ್ಯಂಕ ಇನ್ನಷ್ಟು ಎತ್ತರಕ್ಕೇರುವುದು ಖಚಿತ. ಈ ಹಿಂದೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಹಿಂಜರಿದವರಿಗೆ ಇದು ಹೂಡಿಕೆಗೆ ಸಕಾಲ. ಹಾಗಾದರೆ ಯಾವ ಸ್ಟಾಕ್ ಮೂಲಕ ನೀವು ನಿಮ್ಮ ಪ್ರಯಾಣ ಆರಂಭಿಸಲಿದ್ದೀರಿ? ಯಾವ ಬ್ರೋಕರ್ ಮೂಲಕ ನಿಮ್ಮ ಹೂಡಿಕೆಯ ಪ್ರಯಾಣ ಆರಂಭಿಸಲಿದ್ದೀರಿ? ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡಲೆಂದೇ, ಈ ಹೊಸ ಸುದ್ದಿ ವೆಬ್ ಸೈಟ್ ಆರಂಭವಾಗಿದೆ. ಕೆಲವರಿಗೆ ಇಂಗ್ಲೀಷ್ / ಹಿಂದಿ ಭಾಷೆಗಳಲ್ಲಿನ ಸ್ಟಾಕ್ ಸುದ್ದಿಗಳು ಕನ್ನಡದಲ್ಲಿ ದೊರೆತರೆ ಇನ್ನಷ್ಟು ಲಾಭ ಮಾಡ ಬಹುದು ಎಂಬ ಯೋಚನೆ ಇದೆ. ಇನ್ನು ಮುಂದೆ, ಪ್ರತಿದಿನ ಬೆಳಗ್ಗೆ ನಿಮಗೆ ನಾವು ಸ್ಟಾಕ್ ಸುದ್ದಿ ಕೊಡುತ್ತೇವೆ. ಅತ್ಯಂತ ವಿಶ್ವಾಸಾರ್ಹ ಸುದ್ದಿ ಇದಾಗಲಿದೆ. ಅಂದ ಹಾಗೆ ಸೋಮವಾರ ನೀವು ಯಾವ ಸ್ಟಾಕ್ ಖರೀದಿಸಲು ಯೋಚಿಸುತ್ತಿದ್ದೀರಿ? ನಿಮ್ಮ ಯೋಚನೆಯನ್ನು ನಮಗೆ ತಿಳಿಸಿ. ಆ ಷೇರು ಖರೀದಿಗೆ ಕಾರಣ ಏನು ಎನ್ನುವುದನ್ನು ತಿಳಿಸಿದರೆ ಇತರರಿಗೆ ಉಪಯೋಗವಾಗಬಹುದು. ನೀವು ನಿಮ್ಮ ಕಮೆಂಟ್ ಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ತಿಳಿಸಿ. ಇನ್ನು ನಾವು ನಾಳೆ ಸಿಗೋಣ

ಸ್ಟಾಕ್ ನಲ್ಲಿ ಹೂಡಿಕೆ ಏಕೆ ಉತ್ತಮ?

ಬಡವರಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವರಾಗಿ ಸಾಯುವುದು ತಪ್ಪು. ಸಾಯಲು ಒಂದೇ ದಾರಿ. ಬದುಕಲು ನೂರಾರು ದಾರಿ. ಬದುಕಲು ಹಣ ಬೇಕು. ಈ ಸುಲಭವಾಗಿ ಲಕ್ಷ್ಮಿ ಯಾರಿಗೂ ಒಲಿಯುವುದಿಲ್ಲ ಈ ಹಿನ್ನಲೆಯಲ್ಲಿ, ನಿಮ್ಮ ಹಣವನ್ನು ಹೂಡಿಕೆ ಮಾಡುವುದು ನಿಮ್ಮ ಸಂಪತ್ತು ವೃದ್ಧಿಗೆ ಅತಿ ಸೂಕ್ತ ಮಾರ್ಗ ಎಲ್ಲಿ ಹೂಡಿಕೆ ಮಾಡಬೇಕು? ಹೇಗೆ ಹೂಡಿಕೆ ಮಾಡಬೇಕು? ಇವೆಲ್ಲದರ ಬಗ್ಗೆ ಮಾಹಿತಿ ನೀಡುವ ಸುದ್ದಿ ಜಾಲ ತಾಣ ನಮ್ಮದು. ನಿಮಗೆಂತ ಬ್ಯುಸಿನೆಸ್ ಸುದ್ದಿ ಬೇಕು? ಅದನ್ನು ನಾವು ಕೊಡುತ್ತೇವೆ. ಸ್ಟಾಕ್ ನಲ್ಲಿ ಹೂಡಿಕೆ ಏಕೆ ಉತ್ತಮ? ಸ್ಟಾಕ್ ನಲ್ಲಿ ಹೂಡಿಕೆ ಉತ್ತಮ ಕಾರಣಗಳು ಕೆಲವು ಇವೆ: ಹೆಚ್ಚು ಆರ್ಥಿಕ ಪ್ರಾಮಾಣಿಕತೆ: ಹೂಡಿಕೆ ಸ್ಟಾಕ್ ಕ್ಷೇತ್ರದಲ್ಲಿ ವ್ಯಾಪಾರಿಗಳು ಪ್ರಾಮಾಣಿಕತೆಯನ್ನು ಹೆಚ್ಚಿಸುತ್ತದೆ. ಹೂಡಿಕೆಯ ಉದ್ಯಮದಲ್ಲಿ ಯಶಸ್ವಿಯಾಗುವುದು ಸೂಕ್ತ ಪರಿಶೀಲನೆ, ಪ್ರತಿಷ್ಠೆಯ ಬಗ್ಗೆ ಪ್ರಮಾಣಪತ್ರ ಮತ್ತು ಆರ್ಥಿಕ ಸಂಪತ್ತಿಯ ಮೇಲೆ ಹೊಸ ತನುವೆಲ್ಲಾ ನಿಂತಿರುವುದರ ಮೇಲೆ ನಿರ್ಭರಿಸುತ್ತದೆ. ಹೆಚ್ಚು ಲಾಭ: ಹೂಡಿಕೆ ನಿವ್ಯಕ್ತಿಗಳು ಸ್ಟಾಕ್ ಮಾರ್ಕೆಟ್‌ನಲ್ಲಿ ಅಧಿಕ ಲಾಭವನ್ನು ಪಡೆಯಬಹುದು. ಯಾವುದೇ ಹೂಡಿಕೆ ನಿಧಿಯನ್ನು ಕೊಂಡು ಸ್ಟಾಕ್ ಮಾರ್ಕೆಟ್‌ಗೆ ಹೊಸದಾಗಿ ಬರು ಹೆಚ್ಚು ವಿವಿಧತೆ: ಹೂಡಿಕೆ ನಿಧಿಗಳು ಸ್ಟಾಕ್ ಮಾರ್ಕೆಟ್‌ನಲ್ಲಿ ಹೆಚ್ಚು ವಿವಿಧ ಆವರ್ತನೆಗಳನ್ನು ಒದಗಿಸುತ್ತವೆ. ವ್ಯಾಪಾರಿಗಳು ಬೇರೆ ವಿಧಾನಗಳ ಮೂಲಕ ಹೂ...

ಸೆನ್ಸೆಕ್ ಆಲ್ ಟೈಮ್ ಹೈ 63,588.31 ಕ್ಕೆ ಏರಿಕೆ

ಸೆನ್ಸೆಕ್ ಆಲ್ ಟೈಮ್ ಹೈ 63,588.31 ಕ್ಕೆ ಏರಿಕೆ ಪ್ರಮುಖ ಕಾರಣಗಳು ೧. ಮೋದಿ ಆಡಳಿತ. ಸ್ಥಿರ, ಸದೃಢ ಸರಕಾರ ೨. ಕುಸಿಯುತ್ತಿರುವ ಹಣದುಬ್ಬರ ೩. ವಿದೇಶಿ ಸಾಂಸ್ಥಿಕ ಹೂಡಿಕೆದಾರಿಂದ ಹೆಚ್ಚಿನ ಬಂಡವಾಳ ಹೂಡಿಕೆ ೪. ೨೦೨೪ರಲ್ಲಿ ಮತ್ತೆ ಮೋದಿ ಸರಕಾರ ಅಧಿಕಾರಕ್ಕೆ ಬರಬಹುದೆಂಬ ನಿರೀಕ್ಷೆ.

ಕನ್ನಡದ ಮೊದಲ ಸ್ಟಾಕ್ ಮಾರ್ಕೆಟ್ ಸುದ್ದಿ ವೆಬ್ ಸೈಟ್ ಗೆ ಸ್ವಾಗತ

ಈಗ ಮ್ಯೂಚುಯಲ್ ಫಂಡ್, ಸ್ಟಾಕ್ ಮಾರ್ಕೆಟ್, ಲೈಫ್ ಇನ್ಶೂರೆನ್ಸ್, ಟ್ರೇಡಿಂಗ್, ಇನ್ವೆಸ್ಟ್ಮೆಂಟ್, ಇಂತಹ ವಿಷಯಗಳ ಗೊತ್ತಿಲ್ಲದವರು ಇಲ್ಲವೇ ಇಲ್ಲ. ಆದರೆ ಸಮಸ್ಯೆ ಎಂದರೆ, ಬಹುತೇಕರಿಗೆ ಇಂದೂ ಈ ವ್ಯವಸ್ಥೆಗಳನ್ನು ಉಪಯೋಗಿಸಿಕೊಂಡು ಹಣ ಮಾಡಿಕೊಳ್ಳಲು ಸಾಧ್ಯವಾಗದೆ, ತೊಳಲಾಡುವುದು. ಸೆನ್ಸೆಕ್ ಏರಿದೆ, ಸಂಪತ್ತು ವೃದ್ಧಿಯಾಗಿದೆ ಹೀಗೆ ಸುದ್ದಿಗಳನ್ನು ಎಲ್ಲರೂ ಓದುತ್ತಾರೆ. ಆದರೆ ಅವರಂತೆ ನಮಗೇಕೆ ಹಣ ಮಾಡಲು ಸಾಧ್ಯವಿಲ್ಲ? ಈ ಪರ್ಸನಲ್ ಫೈನಾನ್ಸ್ ಎಂದರೇನು? ಯಾವ ಷೇರು ಖರೀದಿಸಿದರೆ ಉತ್ತಮ? ಜಾಗೃತೆಯಿಂದ ಹಣ ಹೂಡಿಕೆ ಹೇಗೆ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಕನ್ನಡಿಗರೂ ಶ್ರೀಮಂತರಾಗಬೇಕು ಎಂಬ ಏಕೈಕ ಉದ್ದೇಶದಿಂದ ಆರಂಭಿಸಲಾಗಿರುವ ವೆಬ್ಸೈಟ್ ಇದು. ಷೇರು ಮಾರುಕಟ್ಟೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ನೀವು ನಮ್ಮ ಬ್ಲಾಗ್ ಅನ್ನು ಅನುಸರಿಸಿ. ದಿನ ನಿತ್ಯ ಬೆಳಗ್ಗೆನೇ ಷೇರು ಮಾರುಕಟ್ಟೆ ಬಗ್ಗೆ ಅಪ್ಡೇಟ್ಸ್ ಇಲ್ಲಿ ನಿಮಗೆ ಸಿಗಲಿದೆ.