ಪೋಸ್ಟ್‌ಗಳು

Stock

ಈ ಸರಕಾರಿ ಷೇರು ನಿಮ್ಮ ಭಾಗ್ಯ ಬದಲಿಸಬಹುದು

ಹುಡ್ಕೋ  (ಹೌಸಿಂಗ್ ಎಂಡ್ ಅರ್ಬನ್ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ) ಷೇರು ಈಗ ಅತಿ ಅಗ್ಗದಲ್ಲಿ ಲಭ್ಯವಿದೆ. ತಜ್ಞರ ಪ್ರಕಾರ ಈ ಷೇರು ನಿಮ್ಮ ಭಾಗ್ಯ ಬದಲಾಯಿಸಬಹುದು.  ಪ್ರಸ್ತುತ ೬೭ ರುಪಾಯಿಗೆ ಈ ಷೇರು ಲಭ್ಯವಿದೆ. ಮುಂದಿನ ಆರು ತಿಂಗಳಿನಲ್ಲಿ ಈ ಷೇರು ೮೬ರ ಗಡಿ ತಲುಪಬಹುದು ಎನ್ನುತ್ತಾರೆ ತಜ್ಞರು.  ಇನ್ನು ರಿಸ್ಕ್ ಇಲ್ಲದೆ ಹೂಡಿಕೆ ಮಾಡಲು ತಜ್ಞರು ನೀಡುತ್ತಿರುವ ಷೇರು ಸಲಹೆ ಗಳೆಂದರೆ ಬಿಇಎಲ್ , ಗೈಲ್, ಹಾಗು ಬಿಎಚ್ ಇ ಎಲ್ ಷೇರುಗಳನ್ನು. ಈ ಷೇರುಗಳು ಸರಕಾರೀ ಸಂಸ್ಥೆಗಳದಾಗಿದ್ದು, ರಿಸ್ಕ್ ಅತಿ ಕಡಿಮೆ ಎನ್ನುತ್ತಾರೆ ತಜ್ಞರು. 

ನಿಖರವಾದ ನಮ್ಮ ವಿಶ್ಲೇಷಣೆ: 100 ರೂಪಾಯಿ ಗಡಿದಾಟಿದ ಬಿಎಚ್ಇಎಲ್ ಷೇರು

 ಕೇಂದ್ರ ಸರಕಾರ ಸ್ವಾಮ್ಯದ  ಬಿಎಚ್ಇಎಲ್ ಷೇರು 100 ರೂಪಾಯಿ ಗಡಿದಾಟಿದೆ. ಜುಲೈ ೨ನೇ ವಾರದಲ್ಲೇ ನಾವು ಈ ಬಗ್ಗೆ ನಿಖರ ವಿಶ್ಲೇಷಣೆ ನಡೆಸಿದ್ದೆವು. ತಜ್ಞರ ಪ್ರಕಾರ ಇದು ೧೩೦ ರ ಗಡಿ ದಾಟುವ ಸಾಧ್ಯತೆ ಇದೆ.  1.50 ಲಕ್ಷ ಕೋಟಿ  ಆರ್ಡರ್ ಬುಕ್ ಹೊಂದಿರುವ ಕೇಂದ್ರ ಸರಕಾರ ಸ್ವಾಮ್ಯದ ಈ ಸಂಸ್ಥೆ ಈಗ ಎಲ್ಲೆಡೆ ಸುದ್ದಿಯಲ್ಲಿದೆ.  ಈಗ ಮೋದಿ ನೇತೃತ್ವದ ಸರಕಾರ ತನ್ನೆಲ್ಲಾ  ಸಂಸ್ಥೆಗಳ ಸೇವೆಯಲ್ಲಿ ದೊಡ್ಡ ಮಟ್ಟದ ಸುಧಾರಣೆ ತರುತ್ತಿರುವುದರಿಂದ ಈ ಸಂಸ್ಥೆಯ ಷೇರು ಖರೀದಿಗೆ ಈಗ ಸಕಾಲ. ೨-೩ ವರ್ಷಗಳಲ್ಲಿ ಈ ಷೇರು ಎರಡು ಪಟ್ಟು ಆಗ ಬಹುದೆಂಬ ನಿರೀಕ್ಷೆ ಇದೆ.  ನಮ್ಮ ಹಿಂದಿನ ವಿಶ್ಲೇಷಣೆಯ ಲಿಂಕ್ ಈ ಕೆಳಗಿನಂತಿದೆ.  https://stocknewsinkannada.blogspot.com/2023/07/blog-post_18.html ಇನ್ನು ಹೂಡಿಕೆದಾರರಿಗೆ ಇನ್ನೊಂದು ಅತ್ಯುತ್ತಮ ಷೇರು ಬಿಇಎಲ್. ಈ ಬಾರಿಯ ತ್ರೈಮಾಸಿಕ ಫಲಿತಾಂಶ ಕೂಡಾ ಅತ್ಯುತ್ತಮವಾಗಿ ಬಂದಿರುವ ಹಿನ್ನಲೆಯಲ್ಲಿ ಈ ಷೇರು ಕೂಡಾ ಖರೀದಿಗೆ ಈಗ ಸಕಾಲ ಎನ್ನುತ್ತಾರೆ ತಜ್ಞರು .    

ವಿಪ್ರೋ ಷೇರುಗಳಿಗೆ ಮತ್ತೆ ಒಳ್ಳೆ ದೆಸೆ : 450 ರೂಪಾಯಿ ಗುರಿ ನೀಡಿದ್ದಾರೆ ತಜ್ಞರು

 ವಿಪ್ರೋ ಷೇರುಗಳಿಗೆ ಮತ್ತೆ  ಒಳ್ಳೆ ದೆಸೆ :  450 ರೂಪಾಯಿ ಗುರಿ ನೀಡಿದ್ದಾರೆ ತಜ್ಞರು  ಇನ್ಫೋಸಿಸ್ ನಂತೆ ಕನ್ನಡಿಗರ ಮನೆ ಮಾತಾಗಿರುವ ಇನ್ನೊಂದು ಐಟಿ ಸಂಸ್ಥೆ ಎಂದರೆ ಅದು ವಿಪ್ರೋ. ಆದರೆ ಕಳೆದ ಒಂದೂವರೆ ವರ್ಷ, ಈ ಕಂಪನಿಯ ಷೇರು ಹೂಡಿಕೆದಾರರಿಗೆ ಒಂದಿಷ್ಟು ನಷ್ಟ ಉಂಟಾಗಿತ್ತು. ೩೫೦ ರೂಪಾಯಿಯವರೆಗೆ ಈ ಕಂಪನಿ ಷೇರು ಕುಸಿದಿದ್ದರಿಂದ ಒಂದಿಷ್ಟು ಆತಂಕ ಸೃಷ್ಟಿಯಾಗಿತ್ತು.  ಆದರೆ ಈ ಸ್ಟಾಕ್ ಗೆ ಮತ್ತೆ ಈಗ ಗುರು ದೆಸೆ ಆರಂಭವಾದಂತಿದೆ. ತಜ್ಞರು ಈ ಷೇರು ೪೫೦ರ ಗಡಿ ದಾಟ ಬಹುದು ಎಂಬ ವಿಶ್ಲೇಷಣೆ ನೀಡಿದ್ದಾರೆ.  ದೀರ್ಘಾವಧಿಯಲ್ಲಿ ಈ ಷೇರುಗಳು ದ್ವಿಗುಣಗೊಂಡರೂ ಆಶ್ಚರ್ಯವಿಲ್ಲ.  ಇನ್ನು ತಜ್ಞರು ಇನ್ಫೋಸಿಸ್ , ಸೆಸ್ಕ್, ಎಸ್ ಬಿ ಐ, ಹಾಗು ಎನ್ ಎಂ ಡಿ  ಸಿ ಷೇರುಗಳ ಬಗ್ಗೆ ಕೂಡಾ ಆಶಾವಾದ ವ್ಯಕ್ತ ಪಡಿಸಿದ್ದಾರೆ.   

ನಿಖರವಾದ ನಮ್ಮ ವಿಶ್ಲೇಷಣೆ: 67,000 ದಾಟಿದ ಸೆನ್ಸೆಕ್ಸ್ !

ನಮ್ಮ ವಿಶ್ಲೇಷಣೆ ಮತ್ತೆ ಮತ್ತೆ ನಿಜವಾಗುತ್ತಿದೆ. ಸೆನ್ಸೆನ್ಸ್ ಬುಧವಾರ 67,000 ಗಡಿ ದಾಟಿ ಮುನ್ನನುಗ್ಗಿದೆ. ಈ ವರ್ಷದ ಅಂತ್ಯದೊಳಕ್ಕೆ ೧ ಲಕ್ಷಕ್ಕೆ ಏರುವ ನಿರೀಕ್ಷೆ ಇದೆ ಎನ್ನುತ್ತಾರೆ ತಜ್ಞರು.  ಭಾರತೀಯ ಷೇರು ಮಾರುಕಟ್ಟೆಯ ಸದ್ಯದ ಅದೃಷ್ಟವೆಂದರೆ ಕೇಂದ್ರದಲ್ಲಿ ಸುಸ್ಥಿರ ಸರಕಾರ. ಮೋದಿ ಇರುವವರೆಗೆ ಈ ದೇಶದ ಆರ್ಥಿಕತೆಗೆ ಯಾವುದೇ ಅಪಾಯವಿಲ್ಲ.  ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮುನ್ನ ಎಚ್ಚರದಿಂದ ನಿರ್ಧಾರ ತೆಗೆದುಕೊಳ್ಳಿ  ನಮ್ಮ ಬ್ಲಾಗ್ನಲ್ಲಿ ಷೇರುಗಳ ಬಗ್ಗೆ ನಿಖರ ವಿಶ್ಲೇಷಣೆಯನ್ನು ನೀವು ಓದ ಬಹುದಾಗಿದೆ. 

ಈ ಸರಕಾರಿ ಷೇರು ಕೊಂಡರೆ ಭರ್ಜರಿ ಲಾಭ ಎನ್ನುತ್ತಾರೆ ತಜ್ಞರು!

  ಈಗ ಮಾರುಕತೆಯಲ್ಲಿ ಹವಾ ಸೃಷ್ಟಿಸಿರುವ ಷೇರುಗಳಲ್ಲಿ ಪ್ರಮುಖವಾದದ್ದು ಸರಕಾರೀ ಸ್ವಾಮ್ಯದ ಬಿ ಎಚ್ ಇ ಎಲ್ ಸಂಸ್ಥೆ ಷೇರು. ಸದ್ಯಕ್ಕೆ ೯೫ ರೂಪಾಯಿ ಆಜೂಬಾಜಿನಲ್ಲಿರುವ ಈ ಷೇರು  ರೂಪಾಯಿ 125ಕ್ಕೆ ತಲುಪುತ್ತದೆ ಎಂಬ ಲೆಕ್ಕಾಚಾರ  ತಜ್ಞರದ್ದು.  ದೇಶಿಯ ಬ್ರೋಕರೇಜ್ ಸಂಸ್ಥೆಯೊಂದು ಈ ಸ್ಟಾಕ್ ನ   ಗುರಿಯನ್ನು 40ರಿಂದ - 50 ಪ್ರತಿಶತ ಹೆಚ್ಚಿಸಿದ್ದು ಮುಂದಿನ ದಿನಗಳಲ್ಲಿ ಈ ಸ್ಟಾಕ್ 120-125ಕ್ಕೆ ಏರಬಹುದು ಎಂಬ ಮುನ್ಸೂಚನೆ ನೀಡಿದೆ.  ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಯ ಆರ್ಡರ್ ಬುಕ್, ಹೆಚ್ಚುತ್ತಿರುವ ಆದಾಯ ಹಾಗು ಕೇಂದ್ರ ಸರಕಾರದ ಇತ್ತೀಚಿನ ಕೆಲವು ನೀತಿಗಳು,  ಬಿ ಎಚ್ ಇ ಎಲ್ ಷೇರುಗಳು ಗಗನಮುಖಿಯಾಗಲು ಕಾರಣ ಎನ್ನುತ್ತಾರೆ ತಜ್ಞರು.  ಇದು ಕೇಂದ್ರ ಸರಕಾರದ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಸಣ್ಣ ಮಟ್ಟಿಗೆ ಲಾಭಂಶ ಕೂಡಾ ಷೇರುದಾರರಿಗೆ ದೊರೆಯುತ್ತಿದೆ. ಇನ್ನು ವಿದ್ಯುತ್ ಹಾಗು ಇಂಧನ ಕ್ಷೇತ್ರದಲ್ಲಿನ ಹೆಚ್ಚಿನ ಹೂಡಿಕೆ ಸಂಸ್ಥೆಗೆ ಪೂರಕವಾಗಿದೆ ಎಂಬ ವಿಶ್ಲೇಷಣೆ ಇದೆ.  ಈ ಸಂಸ್ಥೆಯ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ. ಸದ್ಯಕ್ಕೆ ಈ ಷೇರು ತೆಗೆದುಕೊಳ್ಳಲು ಯಾವುದೇ ಭೀತಿ ಇಲ್ಲ. 

ಇಂದೇ 67,000 ದಾಟಲಿದೆಯೇ ಸೆನ್ಸೆಕ್ಸ್ ?

ಕಳೆದ ವಾರ ೬೬,೦೦೦  ದಾಟಿದ್ದ  ಸೆನ್ಸೆಕ್ಸ್  ಈ ವಾರ ಇನ್ನೊಂದು ಸಾವಿರ ಅಂಕ ಏರಿಸಿಕೊಂಡು ೬೭,೦೦೦ ಗಡಿ ದಾಟಲು ಸಜ್ಜಾಗಿದೆ. ಮಂಗಳವಾರವೇ ಈ ಶುಭ ದಿನವಾಗಬಹುದು.  ಪ್ರಿ ಓಪನ್ ನಲ್ಲಿ ೨೩೯ ಅಂಶಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ ಇಂದು ಇಡೀ ದಿನ ಹೂಡಿಕೆದಾರರಿಗೆ ಶುಭ ಮಂಗಳವಾರವಾಗುವ ಸೂಚನೆ ನೀಡಿದೆ. ಆದರೆ ಯಾವೆಲ್ಲ ಸ್ಟಾಕ್ ಗಳು ಏರಿಕೆ ಕಾಣ ಬಹುದು ಎಂಬ ಕುತೂಹಲ ಸಂಜೆ ಹೊತ್ತಿಗೆ ಮಾತ್ರವೇ ಗೊತ್ತಾಗಬಹುದು. 

15 ದಿನದಲ್ಲಿ 30,600 ಕೋಟಿ ರೂಪಾಯಿ ಹೂಡಿಕೆ ಮಾಡಿದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು.

  ಮೋದಿ ಮಂತ್ರವನ್ನು ಜಪಿಸುತ್ತಿರುವ  ಈ ದೇಶದ ಆರ್ಥಿಕತೆಯಲ್ಲಿ ವಿದೇಶಿಯರಿಗೆ ನಂಬಿಕೆ ಹೆಚ್ಚಿದಂತಿದೆ. ಜುಲೈ   ತಿಂಗಳ ಮೊದಲ ಹದಿನೈದು ದಿನಗಳಲ್ಲಿ ದೇಶದ ಸ್ಟಾಕ್ ಮಾರುಕಟ್ಟೆಯಲ್ಲಿ  ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ)  ಹೂಡಿದ ಮೊತ್ತ  30,600 ಕೋಟಿ ರೂಪಾಯಿಗಿಂತಲೂ  ಹೆಚ್ಚು  ಇದರೊಂದಿಗೆ ಈ ವರ್ಷ ವಿದೇಶಿ ಹೂಡಿಕೆದಾರರು ಒಂದು ಲಕ್ಷ ಕೋಟಿಗೂ ಅಧಿಕ ಹೂಡಿಕೆಯನ್ನು ಭಾರತೀಯ ಸ್ಟಾಕ್ ಮಾರ್ಕೆಟ್  ನಲ್ಲಿ ಹೂಡಿಕೆ ಮಾಡಿದಂತಾಗಿದೆ.  ವಿಚಿತ್ರವೆಂದ್ರ, ಮಾರ್ಚ್ ಮೊದಲು ಭಾರತೀಯ ಷೇರುಮಾರುಕಟ್ಟೆಯಿಂದ ಹಿಂದಿರುಗಿದ್ದ ವಿದೇಶಿ ಹೂಡಿಕೆದಾರರಿಗೆ ಈಗ ಭಾರತ ಮತ್ತೆ ಅಚ್ಚು ಮೆಚ್ಚಿನ ಹೂಡಿಕೆ ತಾಣವಾಗಿದೆ.  ಇನ್ನು ವಿದೇಶಿಯರ ಅಚ್ಚುಮೆಚ್ಚಿನ ಸ್ಟಾಕ್ ಗಳೆಂದರೆ  ಹಣಕಾಸು, ವಾಹನ, ಬಂಡವಾಳ ಸರಕುಗಳು, ರಿಯಲ್ ಎಸ್ಟೇಟ್  ಮತ್ತು  ಗ್ರಾಹಕ ಉತ್ಪನ್ನ ಕಂಪನಿಗಳು.