ನಿಖರವಾದ ನಮ್ಮ ವಿಶ್ಲೇಷಣೆ: 100 ರೂಪಾಯಿ ಗಡಿದಾಟಿದ ಬಿಎಚ್ಇಎಲ್ ಷೇರು
ಕೇಂದ್ರ ಸರಕಾರ ಸ್ವಾಮ್ಯದ ಬಿಎಚ್ಇಎಲ್ ಷೇರು 100 ರೂಪಾಯಿ ಗಡಿದಾಟಿದೆ. ಜುಲೈ ೨ನೇ ವಾರದಲ್ಲೇ ನಾವು ಈ ಬಗ್ಗೆ ನಿಖರ ವಿಶ್ಲೇಷಣೆ ನಡೆಸಿದ್ದೆವು. ತಜ್ಞರ ಪ್ರಕಾರ ಇದು ೧೩೦ ರ ಗಡಿ ದಾಟುವ ಸಾಧ್ಯತೆ ಇದೆ. 1.50 ಲಕ್ಷ ಕೋಟಿ ಆರ್ಡರ್ ಬುಕ್ ಹೊಂದಿರುವ ಕೇಂದ್ರ ಸರಕಾರ ಸ್ವಾಮ್ಯದ ಈ ಸಂಸ್ಥೆ ಈಗ ಎಲ್ಲೆಡೆ ಸುದ್ದಿಯಲ್ಲಿದೆ. ಈಗ ಮೋದಿ ನೇತೃತ್ವದ ಸರಕಾರ ತನ್ನೆಲ್ಲಾ ಸಂಸ್ಥೆಗಳ ಸೇವೆಯಲ್ಲಿ ದೊಡ್ಡ ಮಟ್ಟದ ಸುಧಾರಣೆ ತರುತ್ತಿರುವುದರಿಂದ ಈ ಸಂಸ್ಥೆಯ ಷೇರು ಖರೀದಿಗೆ ಈಗ ಸಕಾಲ. ೨-೩ ವರ್ಷಗಳಲ್ಲಿ ಈ ಷೇರು ಎರಡು ಪಟ್ಟು ಆಗ ಬಹುದೆಂಬ ನಿರೀಕ್ಷೆ ಇದೆ. ನಮ್ಮ ಹಿಂದಿನ ವಿಶ್ಲೇಷಣೆಯ ಲಿಂಕ್ ಈ ಕೆಳಗಿನಂತಿದೆ. https://stocknewsinkannada.blogspot.com/2023/07/blog-post_18.html ಇನ್ನು ಹೂಡಿಕೆದಾರರಿಗೆ ಇನ್ನೊಂದು ಅತ್ಯುತ್ತಮ ಷೇರು ಬಿಇಎಲ್. ಈ ಬಾರಿಯ ತ್ರೈಮಾಸಿಕ ಫಲಿತಾಂಶ ಕೂಡಾ ಅತ್ಯುತ್ತಮವಾಗಿ ಬಂದಿರುವ ಹಿನ್ನಲೆಯಲ್ಲಿ ಈ ಷೇರು ಕೂಡಾ ಖರೀದಿಗೆ ಈಗ ಸಕಾಲ ಎನ್ನುತ್ತಾರೆ ತಜ್ಞರು .