ಸೋಮವಾರ ಯಾವ ಸ್ಟಾಕ್ ಖರೀದಿಸಲಿದ್ದೀರಿ?

ಭಾರತೀಯ ಷೇರು ಮಾರುಕಟ್ಟೆ ಹೊಸ ದಾಖಲೆ ಬರೆಯುತ್ತಿದೆ. ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರ ಹೊಮ್ಮುವ ನಿಟ್ಟಿನಲ್ಲಿ ದಾಪುಗಾಲಿಡುತ್ತಿರುವ ಭಾರತದ ಷೇರು ಮಾರುಕಟ್ಟೆಯ ಸೂಚ್ಯಂಕ ಇನ್ನಷ್ಟು ಎತ್ತರಕ್ಕೇರುವುದು ಖಚಿತ. ಈ ಹಿಂದೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಹಿಂಜರಿದವರಿಗೆ ಇದು ಹೂಡಿಕೆಗೆ ಸಕಾಲ. ಹಾಗಾದರೆ ಯಾವ ಸ್ಟಾಕ್ ಮೂಲಕ ನೀವು ನಿಮ್ಮ ಪ್ರಯಾಣ ಆರಂಭಿಸಲಿದ್ದೀರಿ? ಯಾವ ಬ್ರೋಕರ್ ಮೂಲಕ ನಿಮ್ಮ ಹೂಡಿಕೆಯ ಪ್ರಯಾಣ ಆರಂಭಿಸಲಿದ್ದೀರಿ? ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡಲೆಂದೇ, ಈ ಹೊಸ ಸುದ್ದಿ ವೆಬ್ ಸೈಟ್ ಆರಂಭವಾಗಿದೆ. ಕೆಲವರಿಗೆ ಇಂಗ್ಲೀಷ್ / ಹಿಂದಿ ಭಾಷೆಗಳಲ್ಲಿನ ಸ್ಟಾಕ್ ಸುದ್ದಿಗಳು ಕನ್ನಡದಲ್ಲಿ ದೊರೆತರೆ ಇನ್ನಷ್ಟು ಲಾಭ ಮಾಡ ಬಹುದು ಎಂಬ ಯೋಚನೆ ಇದೆ. ಇನ್ನು ಮುಂದೆ, ಪ್ರತಿದಿನ ಬೆಳಗ್ಗೆ ನಿಮಗೆ ನಾವು ಸ್ಟಾಕ್ ಸುದ್ದಿ ಕೊಡುತ್ತೇವೆ. ಅತ್ಯಂತ ವಿಶ್ವಾಸಾರ್ಹ ಸುದ್ದಿ ಇದಾಗಲಿದೆ. ಅಂದ ಹಾಗೆ ಸೋಮವಾರ ನೀವು ಯಾವ ಸ್ಟಾಕ್ ಖರೀದಿಸಲು ಯೋಚಿಸುತ್ತಿದ್ದೀರಿ? ನಿಮ್ಮ ಯೋಚನೆಯನ್ನು ನಮಗೆ ತಿಳಿಸಿ. ಆ ಷೇರು ಖರೀದಿಗೆ ಕಾರಣ ಏನು ಎನ್ನುವುದನ್ನು ತಿಳಿಸಿದರೆ ಇತರರಿಗೆ ಉಪಯೋಗವಾಗಬಹುದು. ನೀವು ನಿಮ್ಮ ಕಮೆಂಟ್ ಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ತಿಳಿಸಿ. ಇನ್ನು ನಾವು ನಾಳೆ ಸಿಗೋಣ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?