66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಗುರುವಾರ ವಿನೂತನ ದಾಖಲೆ ಸಾಧಿಸಿತು. ಷೇರು ಸೂಚ್ಯಂಕ 66,000 ಗಡಿ ದಾಟಿತು. 6೦೦ ಅಧಿಕ ಅಂಶ ಏರಿಕೆಯೊಂದಿಗೆ ಈ ವಿನೂತನ ದಾಖಲೆ ಸಾಧಿಸಲಾಯಿತು. ಸೆನ್ಸೆಕ್ಸ್ ಮುಂದಿನ ನಿಲ್ದಾಣ ೭೦,೦೦೦ ಅನ್ನುತ್ತಾರೆ ತಜ್ಞರು.
ಝೋಮ್ಯಾಟೋ, ಜೆನ್ ಟೆಕ್ ಹೀಗೆ ಸಾಲು ಸಾಲು ಸ್ಟಾಕ್ ಗಳು ಹೊಸ ಎತ್ತರಕ್ಕೆ ಗುರುವಾರ ಏರಿದವು. ಆ ಮೂಲಕ ಹೊಸ ದಾಖಲೆಗಳನ್ನು ಸ್ಟಾಕ್ ಮಾರ್ಕೆಟ್ ಸೃಷ್ಟಿಸಿತು.
ಹಣದುಬ್ಬರ ಸೇರಿದಂತೆ ಸಧ್ಯಕ್ಕೆ ದೇಶದ ಆರ್ಥಿಕತೆಗೆ ಅತಿ ದೊಡ್ಡ ಸವಾಲು ಗಳೇನಿಲ್ಲ. ಹೀಗಾಗಿ ಸೆನ್ಸೆಕ್ ಇನ್ನಷ್ಟು ಎತ್ತರಕ್ಕೇರುವುದು ಖಚಿತ ಎನ್ನುತ್ತಾರೆ ತಜ್ಞರು.
ಜಾಗತಿಕ ಆರ್ಥಿಕ ಮಾರುಕಟ್ಟೆ ಕೂಡಾ ಸ್ಥಿರವಾಗಿದೆ. ಸದ್ಯಕ್ಕೆ ಇರುವ ಬಹು ದೊಡ್ಡ ಸವಾಲು ರಷ್ಯಾ-ಉಕ್ರೇನ್ ಯುದ್ಧ. ಇದನ್ನು ಹೊರತು ಪಡಿಸಿದರೆ ಗೂಳಿ ಓಟ ಸದ್ಯ ನಿರಾತಂಕದಲ್ಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ