ನೆನಪಿಡಿ: ಈ ಸರಕಾರಿ ಸ್ಟಾಕ್ 1,200 ರೂಪಾಯಿಗೂ ಮಿಕ್ಕಿ ಕುಸಿದಿದೆ!
ಕೇಂದ್ರ ಸರಕಾರ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತನ್ನ ೫೨ ವಾರಗಳ ಗರಿಷ್ಠ ಮಟ್ಟದಿಂದ ಸುಮಾರು 1,200 ರೂಪಾಯಿಗೂ ಹೆಚ್ಚು ಕುಸಿದಿದೆ. ಈಗ ಈ ಷೇರು ಮತ್ತೆ ಸುದ್ದಿಯಲ್ಲಿದೆ ಅದಕ್ಕೆ ಕಾರಣ ಇಷ್ಟೇ.
ಶನಿವಾರ ಈ ನವರತ್ನ ಸಂಸ್ಥೆಯನ್ನು ಕೇಂದ್ರ ಸರಕಾರ ಮಹಾರತ್ನ ಸಂಸ್ಥೆಯಾಗಿ ಘೋಷಿಸಿದೆ. ಹೀಗಾಗಿ, ಸೋಮವಾರವೂ ಈ ಸಂಸ್ಥೆಯ ಷೇರು ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುವ ನಿರೀಕ್ಷೆ ಇದೆ.
ದೇಶದ ೧೪ನೇ ಮಹಾರತ್ನವಾಗಿ ಘೋಷಣೆಯಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆಯ ಷೇರುಗಳು ಕಳೆದ ಆರು ತಿಂಗಳಲ್ಲಿ ಕುಸಿತದ ದಾರಿಯಲ್ಲಿದೆ. ಆದಾಯ, ಲಾಭ, ಹಾಗು ಶೂನ್ಯ ಸಾಲ ಹೀಗೆ ಎಲ್ಲವು ಧನಾತ್ಮಕವಾಗಿದ್ದರು ಈ ಷೇರುಗಳ ಕುಸಿತ ಎಲ್ಲ ಹೂಡಿಕೆದಾರರ ನೆಮ್ಮದಿ ಕಸಿದಿದೆ.
ಸದ್ಯಕ್ಕೆ ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ ಇದಕ್ಕಿಂತ ಬೆಸ್ಟ್ ಸ್ಟಾಕ್ ಇನ್ನೊಂದಿಲ್ಲ.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು )
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ