15 ದಿನದಲ್ಲಿ 30,600 ಕೋಟಿ ರೂಪಾಯಿ ಹೂಡಿಕೆ ಮಾಡಿದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು.
ಮೋದಿ ಮಂತ್ರವನ್ನು ಜಪಿಸುತ್ತಿರುವ ಈ ದೇಶದ ಆರ್ಥಿಕತೆಯಲ್ಲಿ ವಿದೇಶಿಯರಿಗೆ ನಂಬಿಕೆ ಹೆಚ್ಚಿದಂತಿದೆ. ಜುಲೈ ತಿಂಗಳ ಮೊದಲ ಹದಿನೈದು ದಿನಗಳಲ್ಲಿ ದೇಶದ ಸ್ಟಾಕ್ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐ) ಹೂಡಿದ ಮೊತ್ತ 30,600 ಕೋಟಿ ರೂಪಾಯಿಗಿಂತಲೂ ಹೆಚ್ಚು
ಇದರೊಂದಿಗೆ ಈ ವರ್ಷ ವಿದೇಶಿ ಹೂಡಿಕೆದಾರರು ಒಂದು ಲಕ್ಷ ಕೋಟಿಗೂ ಅಧಿಕ ಹೂಡಿಕೆಯನ್ನು ಭಾರತೀಯ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದಂತಾಗಿದೆ.
ವಿಚಿತ್ರವೆಂದ್ರ, ಮಾರ್ಚ್ ಮೊದಲು ಭಾರತೀಯ ಷೇರುಮಾರುಕಟ್ಟೆಯಿಂದ ಹಿಂದಿರುಗಿದ್ದ ವಿದೇಶಿ ಹೂಡಿಕೆದಾರರಿಗೆ ಈಗ ಭಾರತ ಮತ್ತೆ ಅಚ್ಚು ಮೆಚ್ಚಿನ ಹೂಡಿಕೆ ತಾಣವಾಗಿದೆ.
ಇನ್ನು ವಿದೇಶಿಯರ ಅಚ್ಚುಮೆಚ್ಚಿನ ಸ್ಟಾಕ್ ಗಳೆಂದರೆ ಹಣಕಾಸು, ವಾಹನ, ಬಂಡವಾಳ ಸರಕುಗಳು, ರಿಯಲ್ ಎಸ್ಟೇಟ್ ಮತ್ತು ಗ್ರಾಹಕ ಉತ್ಪನ್ನ ಕಂಪನಿಗಳು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ