ರಾಕಿಂಗ್ ಸ್ಟಾಕ್ : ರೂ 700ಕ್ಕೆ ಏರಲಿದೆಯೇ ಟಾಟಾ ಮೋಟರ್ಸ್ ಸ್ಟಾಕ್?


ಟಾಟಾ ಮೊಟರ್ಸ್  ಕಂಪನಿ ನಮ್ಮ ದೇಶದ ಪ್ರತಿಷ್ಠಿತ ಕಂಪೆನಿಗಳಲ್ಲೊಂದು. ಈಗ ಸ್ಟಾಕ್ ಮಾರ್ಕೆಟ್ ನಲ್ಲಿ ಕೆಲವು ಟಾಟಾ ಸ್ಟಾಕ್ ಗಳ  ಕಡಿಮೆಯಾಗಿದ್ದರೂ ಟಾಟಾ ಮೋಟರ್ಸ್ ಹವಾ ದಿನದಿಂದ ದಿನಕ್ಕೆ ಹೆಚ್ಚ್ಚುತ್ತಿದೆ.

ಬುಧವಾರ ಬೆಳಗ್ಗೆ  ಟಾಟಾ ಮೋಟರ್ಸ್ ಗೆ  ತಜ್ಞರು ನೀಡಿರುವ ಹೊಸ ಟಾರ್ಗೆಟ್  ರೂಪಾಯಿ ೭೦೦. ಮೋತಿಲಾಲ್ ಓಸ್ವಾಲ್ ಸಂಸ್ಥೆ ಈ ಹೊಸ ಟಾರ್ಗೆಟ್ ಫಿಕ್ಸ್ ಮಾಡಿದೆ. ಜುಲೈ ೧೦ರ ಕಂಪನಿಯ ಸಂಶೋಧನಾ ವರದಿಯಲ್ಲಿ ಈ ಹೊಸ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ ಎಂದು ಮನಿ ಕಂಟ್ರೋಲ್ ವೆಬ್ ಸೈಟ್ ವರದಿ ಮಾಡಿದೆ.

ಕಳೆದ ೫೨ ವಾರಗಳ ಅವಧಿಯಲ್ಲಿ ಟಾಟಾ ಮೋಟರ್ಸ್ ಸ್ಟಾಕ್ ೩೭೫.೫೦- ೬೩೪.೬೦ ರ ನಡುವೆ ಚಲಿಸಿದೆ.

ನಿಮ್ಮಲ್ಲಿ ಈ ಷೇರು ಖರೀದಿಸಲು  ಬೇಕಾದಷ್ಟು ಹಣ  ಇಲ್ಲವಾದರೆ ಟಾಟಾ ಮೋಟರ್ಸ್ ಡಿವಿಆರ್  ಸ್ಟಾಕ್ ಖರೀದಿಸಬಹುದು. ಅದು ಕೂಡ ಮೇಲೇರುವ ಎಲ್ಲಾ ಸಾಧ್ಯತೆಗಳಿವೆ. ಟಾಟಾ ಮೋಟರ್ಸ್ ಸ್ಟಾಕ್ ಜೊತೆಗೆ ಅದು ಕೂಡಾ ಏರಿಳಿತ ಕಾಣುತ್ತದೆ.

(ನೀವು ಸ್ಟಾಕ್ ಖರೀದಿಸುವಾಗ ಅತಿ ಎಚ್ಚರದಿಂದಿರಿ. ನಾವು ಕೊಡುವುತ್ತಿರುವುದು ಕೇವಲ ಸುದ್ದಿ ಮತ್ತು ವಿಶ್ಲೇಷಣೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಬಿ ಎಸ್  ಇ / ಎನ್  ಎಸ  ಇ/ ಸೆಬಿ/ ದಸ್ತಾವೇಜು- ದಾಖಲೆಗಳನ್ನು ಪರಿಶೀಲಿಸಿರಿ ). 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?