ಇವತ್ತು ಈ ಷೇರು ಖರೀದಿಸಿದರೆ ಸಿಗುತ್ತೆ 92 ರೂಪಾಯಿ ಡಿವಿಡೆಂಡ್!

ಡೀಸೆಲ್ ಎಂಜಿನ್ ತಯಾರಕ ಸಂಸ್ಥೆ ಸ್ವರಾಜ್ ಎಂಜಿನ್ ನ ೯೨ ರೂಪಾಯಿ ಡಿವಿಡೆಂಡ್ ಬೇಕಾದರೆ, ನೀವಿವತ್ತೇ ಈ ಷೇರು ಖರೀದಿಸಬೇಕು. 

 ಏಕೆಂದರೆ ಈ ಡಿವಿಡೆಂಡ್ ಪಡೆಯಲು ಅರ್ಹತೆ ಹೊಂದಲು ಎಕ್ಸ್ ಡೇಟ್ ಜುಲೈ ೭.

ಸ್ವರಾಜ್ ಇಂಜಿನ್‌ ಸಂಸ್ಥೆಯ ನಿರ್ದೇಶಕರ ಮಂಡಳಿಯು ಪ್ರತಿ ಇಕ್ವಿಟಿ ಷೇರಿಗೆ ರೂ 92 ರಷ್ಟು ಲಾಭಾಂಶವನ್ನು ಶಿಫಾರಸು ಮಾಡಿದೆ. 

 ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ದಾಖಲೆಗಳ ಪ್ರಕಾರ ಈ ಸಂಸ್ಥೆಯ ಷೇರು ೫೨ ವಾರಗಳ ಅವಧಿಯಲ್ಲಿ ರೂಪಾಯಿ ೨,೨೧೬ - ರೂಪಾಯಿ ೧,೩೯೫ರ ನಡುವೆ ಇದೆ. ೫೨ವಾರಗಳ ಅತಿ ಕಡಿಮೆ ಬೆಲೆ ಮಾರ್ಚ್ ೧೩ರಂದು ದಾಖಲಾಗಿತ್ತು. 

ಅಂದಿನಿಂದ ಈ ಷೇರು ಬೆಲೆ ಏರಿಕೆ ದಾಖಲಿಸುತ್ತಲೇ ಇದೆ.

 ಈ ವಾರದಲ್ಲಿ ಅದು ವರ್ಷದ ಅತ್ಯಧಿಕ ಮಟ್ಟದ ಬೆಲೆ ಕಂಡಿತ್ತು. ಸಂಸ್ಥೆಯ ಲಾಭಂಶ ಹಾಗು ಆದಾಯ ಪ್ರತಿ ತ್ರೈಮಾಸಿಕ ಅವಧಿಯಲ್ಲಿ ಹೆಚ್ಚಳ ಕಂಡಿದೆ. 

 ನಿಮಗೆ ಈ ವಿಶ್ಲೇಷಣೆ ಇಷ್ಟವಾದರೆ, ದಯವಿಟ್ಟು ಈ ಸುದ್ದಿಯನ್ನು ಶೇರ್ ಮಾಡಿ, ನಮ್ಮಲ್ಲೂ ಫಾಲೋ ಮಾಡಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?