ಎನ್ಎಂಡಿಸಿ ಸ್ಟೀಲ್ ಸ್ಟಾಕ್: ಖರೀದಿಗೆ ಸಕಾಲವೇ?
ಛತ್ತೀಸಘಡ ನಗರಮಾರ್ ಘಟಕ ಉದ್ಘಾಟನೆಗೆ ಸಜ್ಜಾಗಿದೆ. ಮೊನ್ನೆಯಷ್ಟೇ ಹಾಟ್ ರೊಲ್ಡ್ ಕಾಯಿಲ್ಸ್ಗಳ ಪ್ರಾಯೋಗಿಕ ಉತ್ಪಾದನೆ ಆರಂಭವಾಗಿದೆ. ಇದರೊಂದಿಗೆ ಈ ಘಟಕದ ಖಾಸಗೀಕರಣಕ್ಕೆ ಕೂಡಾ ವೇದಿಕೆ ಸಜ್ಜಾಗಿದೆ.
ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಎನ್ಎಂಡಿಸಿ ಷೇರುಗಳು ರೂಪಾಯಿ 43.51ಕ್ಕೆ ಮುಕ್ತಾಯಗೊಂಡಿದ್ದವು. ಸೋಮವಾರ ಈ ಪ್ರಾಯೋಗಿಕ ಉತ್ಪಾದನೆಯ ಸುದ್ದಿ ಈ ಸ್ಟಾಕ್ ಬೆಲೆ ಇನ್ನಷ್ಟು ಹೆಚ್ಚಲು ಕಾರಣವಾಗುವ ಸಾಧ್ಯತೆ ಇದೆ.
ಕೇಂದ್ರ ಸರಕಾರ, ಈ ಸಂಸ್ಥೆಯ ಖಾಸಗೀಕರಣದ ನಿರ್ಧಾರವನ್ನು ಈಗಾಗಲೇ ತೆಗೆದುಕೊಂಡಿದ್ದು, ಒಮ್ಮೆ ಈ ಕಾರ್ಖಾನೆ ಸಂಪೂರ್ಣವಾಗಿ ಉತ್ಪಾದನೆಗೆ ತೊಡಗಿದ ಮೇಲೆ ಖಾಸಗೀಕರಣ ಪ್ರಕ್ರಿಯೆ ಇನ್ನಷ್ಟು ವೇಗ ಪಡೆಯುಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಈ ಷೇರು, ಸುದೀರ್ಘ ಕಾಲದ ಹೂಡಿಕೆಗೆ ಉತ್ತಮ ಷೇರು ಎನ್ನುತ್ತಾರೆ ತಜ್ಞರು.
ಸಾಮಾನ್ಯ ಅಭಿಪ್ರಾಯವೆಂದರೆ, ಯಾವುದೇ ಒಂದು ಸಂಸ್ಥೆಯನ್ನು ಖಾಸಗೀಕರಣಗೊಳಿಸಿದರೆ, ಅದರ ಷೇರು ಮೌಲ್ಯ ಹೆಚ್ಚಳವಾಗುತ್ತದೆ. ಈ ಈ ಸಂಸ್ಥೆಯ ಷೇರು ಈಗ ಅತಿ ಕಡಿಮೆ ದರಕ್ಕೆ ಲಭ್ಯವಿದೆ. ಹೀಗಾಗಿ ಹೂಡಿಕೆದಾರರು ಈ ಷೇರು ಖರೀದಿಗೆ ಹೆಚ್ಚಿನ ಸಂಶೋಧನೆ ನಡೆಸಿ ನಿರ್ಧರಿಸಬಹುದು.
ಕೇಂದ್ರ ಸರಕಾರ ಸ್ವಾಮ್ಯದ ಸಂಸ್ಥೆಗಳು ಈಗ ಆರ್ಥಿಕವಾಗಿ ಬಲಿಷ್ಠವಾಗುತ್ತಿವೆ. ಒಂದೊಮ್ಮೆ ಖಾಸಗೀಕರಣ ಪ್ರಕ್ರಿಯೆ ವಿಫಲಗೊಂಡರೂ ಈ ಸಂಸ್ಥೆಯ ಷೇರು ಬೆಲೆ ಬೆಲೆ ಮೇಲೆ ಹೆಚ್ಚಿನ ಪ್ರಭಾವ ಬೀರಲಿಕ್ಕಿಲ್ಲ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ