ಈ ಸರಕಾರಿ ಷೇರು ಕೊಂಡರೆ ಭರ್ಜರಿ ಲಾಭ ಎನ್ನುತ್ತಾರೆ ತಜ್ಞರು!

 


ಈಗ ಮಾರುಕತೆಯಲ್ಲಿ ಹವಾ ಸೃಷ್ಟಿಸಿರುವ ಷೇರುಗಳಲ್ಲಿ ಪ್ರಮುಖವಾದದ್ದು ಸರಕಾರೀ ಸ್ವಾಮ್ಯದ ಬಿ ಎಚ್ ಇ ಎಲ್ ಸಂಸ್ಥೆ ಷೇರು. ಸದ್ಯಕ್ಕೆ ೯೫ ರೂಪಾಯಿ ಆಜೂಬಾಜಿನಲ್ಲಿರುವ ಈ ಷೇರು  ರೂಪಾಯಿ 125ಕ್ಕೆ ತಲುಪುತ್ತದೆ ಎಂಬ ಲೆಕ್ಕಾಚಾರ  ತಜ್ಞರದ್ದು. 

ದೇಶಿಯ ಬ್ರೋಕರೇಜ್ ಸಂಸ್ಥೆಯೊಂದು ಈ ಸ್ಟಾಕ್ ನ   ಗುರಿಯನ್ನು 40ರಿಂದ - 50 ಪ್ರತಿಶತ ಹೆಚ್ಚಿಸಿದ್ದು ಮುಂದಿನ ದಿನಗಳಲ್ಲಿ ಈ ಸ್ಟಾಕ್ 120-125ಕ್ಕೆ ಏರಬಹುದು ಎಂಬ ಮುನ್ಸೂಚನೆ ನೀಡಿದೆ. 

ವೇಗವಾಗಿ ಬೆಳೆಯುತ್ತಿರುವ ಸಂಸ್ಥೆಯ ಆರ್ಡರ್ ಬುಕ್, ಹೆಚ್ಚುತ್ತಿರುವ ಆದಾಯ ಹಾಗು ಕೇಂದ್ರ ಸರಕಾರದ ಇತ್ತೀಚಿನ ಕೆಲವು ನೀತಿಗಳು, 

ಬಿ ಎಚ್ ಇ ಎಲ್ ಷೇರುಗಳು ಗಗನಮುಖಿಯಾಗಲು ಕಾರಣ ಎನ್ನುತ್ತಾರೆ ತಜ್ಞರು. 

ಇದು ಕೇಂದ್ರ ಸರಕಾರದ ಸ್ವಾಮ್ಯದ ಸಂಸ್ಥೆಯಾಗಿರುವುದರಿಂದ ಸಣ್ಣ ಮಟ್ಟಿಗೆ ಲಾಭಂಶ ಕೂಡಾ ಷೇರುದಾರರಿಗೆ ದೊರೆಯುತ್ತಿದೆ. ಇನ್ನು ವಿದ್ಯುತ್ ಹಾಗು ಇಂಧನ ಕ್ಷೇತ್ರದಲ್ಲಿನ ಹೆಚ್ಚಿನ ಹೂಡಿಕೆ ಸಂಸ್ಥೆಗೆ ಪೂರಕವಾಗಿದೆ ಎಂಬ ವಿಶ್ಲೇಷಣೆ ಇದೆ. 


ಈ ಸಂಸ್ಥೆಯ ಮುಖ್ಯ ಕಚೇರಿ ಬೆಂಗಳೂರಿನಲ್ಲಿದೆ. ಸದ್ಯಕ್ಕೆ ಈ ಷೇರು ತೆಗೆದುಕೊಳ್ಳಲು ಯಾವುದೇ ಭೀತಿ ಇಲ್ಲ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?