ಹಿಂದೂಸ್ತಾನ್ ಏರೋನಾಟಿಕ್ಸ್, ಭಾರತ್ ಇಲೆಕ್ಟ್ರಾನಿಕ್ಸ್ : ನೀವು ವಿಶ್ವಾಸದಿಂದ ಖರೀದಿಸಬಹುದಾದ ಎರಡು ಷೇರುಗಳು
ಹಿಂದೂಸ್ತಾನ್ ಏರೋನಾಟಿಕ್ಸ್, ಭಾರತ್ ಇಲೆಕ್ಟ್ರಾನಿಕ್ಸ್ : ನೀವು ವಿಶ್ವಾಸದಿಂದ ಖರೀದಿಸಬಹುದಾದ ಎರಡು ಷೇರುಗಳು
ಷೇರು ಪೇಟೆಯ ನಾಗಾಲೋಟ ಮುಂದುವರಿದಿದೆ. ಈ ಗೂಳಿ ಓಟ ಎಲ್ಲಿಯವರೆಗೆ ಎಂಬುದು ತಿಳಿದಿಲ್ಲ. ಒಂದೊಮ್ಮೆ ಷೇರು ಪೇಟೆ ಅಲ್ಪ ಕುಸಿತ ಕಂಡರೂ ನೀವು ನಷ್ಟದ ಭಯವಿಲ್ಲದೆ ಹೂಡಿಕೆ ಮಾಡಬಹುದಾದ ಎರಡು ಷೇರುಗಳೆಂದರೆ ಹಿಂದೂಸ್ತಾನ್ ಏರೋನಾಟಿಕ್ಸ್, ಭಾರತ್ ಇಲೆಕ್ಟ್ರಾನಿಕ್ಸ್ .
ನರೇಂದ್ರ ಮೋದಿ ಸರಕಾರದ ಬಹು ಮಹತ್ವಾಕಾಂಕ್ಷೆಯ ಮೇಕ್-ಇನ್-ಇಂಡಿಯಾ ಮತ್ತು ಆತ್ಮನಿರ್ಭರ್ ಭಾರತ್ ನ ಪ್ರಮುಖ ಫಲಾನುಭವಿಗಳೆಂದರೆ ಹಿಂದೂಸ್ತಾನ್ ಏರೋನಾಟಿಕ್ಸ್, ಮತ್ತು ಭಾರತ್ ಇಲೆಕ್ಟ್ರಾನಿಕ್ಸ್ . ದೇಶದ ರಕ್ಷಣಾ ಕ್ಷೇತ್ರಕ್ಕೆ ಮೋದಿ ಸರಕಾರ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಈ ಎರಡು ಷೇರುಗಳು ಇನ್ನಷ್ಟು ದೊಡ್ಡ ಮಟ್ಟದ ಏರಿಕೆ ಕಾಣುವ ಸಾಧ್ಯತೆ ಇದೆ. ಈಗ ಹುಡಿಗೆ ಮಾಡಿದರೆ ಕನಿಷ್ಠ ಒಂದು ವರ್ಷ ನೀವು ಇದಕ್ಕಾಗಿ ಕಾಯಬೇಕಾಗಿ ಬರಬಹುದು.
ಅಮೆರಿಕಾದ ಜಿಇ ಸಂಸ್ಥೆ ಜೊತೆಗಿನ ಒಪ್ಪಂದ ಹಾಗು ಸ್ಟಾಕ್ ಸ್ಪ್ಲಿಟ್ ಹಿಂದೂಸ್ತಾನ್ ಏರೋನಾಟಿಕ್ಸ್, ಷೇರು ಆಗಸದೆತ್ತರಕ್ಕೇರಲು ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.
ಸಾರ್ವಜನಿಕ ಸಂಸ್ಥೆಗಳಾದ್ದರಿಂದ ಹೂಡಿದ ಹಣಕ್ಕೆ ಖಂಡಿತ ಮೋಸ ಇರಲಾರದು.
ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಸೆಕ್ಷನ್ ನಲ್ಲಿ ಬರೆದು ನಮಗೆ ತಿಳಿಸಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ