ಈ ಅಗ್ಗದ ಷೇರುಗಳು ನಿಮಗೆ ದೊಡ್ಡ ಲಾಭ ತಂದುಕೊಡಬಹುದೇ?

 




ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಭರ್ಜರಿಯಾಗಿ ಸಾಗಿದೆ. ಒಂದೊಮ್ಮೆ ಮಾರ್ಕೆಟ್ ಕುಸಿದಾರೂ ಅದು ಪಾತಾಳ ತಲುಪುವ ಸಾಧ್ಯತೆಗಳಿಲ್ಲ. ಹೀಗಾಗಿ, ಇನ್ನು ಕೆಲವು ತಿಂಗಳುಗಳ ಕಾಲ ಕರಡಿ ಕುಣಿತ ಕಾಣಿಸಿಕೊಳ್ಳುವುದು ಅನುಮಾನ. ಹೂಡಿಕೆದಾರರು ಪ್ರಾಫಿಟ್ ಬುಕಿಂಗ್ ಮಾಡಿದರೆ ಷೇರುಗಳ ದರ ಅಲ್ಪ ಮಟ್ಟಿಗೆ ಮೇಲೆ ಕೆಳಗಾಗಬಹುದು.


ಈ ಹಿನ್ನಲೆಯಲ್ಲಿ ಕೆಲವು ತಜ್ಞರು ಹೂಡಿಕೆದಾರರಿಗೆ ಅಲ್ಪ ಹೂಡಿಕೆಯಲ್ಲಿ ದೊಡ್ಡ ಲಾಭ ತಂದು ಕೊಡಬಹುದಾದ ಕೆಲವು ಷೇರುಗಳನ್ನು ಪಟ್ಟಿ ಮಾಡಿದ್ದಾರೆ. ಈ ಪೈಕಿ ಅತಿ ಪ್ರಮುಖವಾದುದು ಲೇಮನ್ ಟ್ರೀ ಹೋಟೆಲ್ .

ತಜ್ಞರ ಪ್ರಕಾರ ಪ್ರಸ್ತುತ ರೂಪಾಯಿ ೯೨ರ ಆಚೀಚೆ ಇರುವ ಈ ಷೇರು ೧೧೫ಕ್ಕೆ ತಲುಪುವ ನಿರೀಕ್ಷೆ ಇದೆ. ದೇಶದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಜೋರಾಗಿ ಸಾಗುತ್ತಿರುವ ಹಿನ್ನಲೆಯಲ್ಲಿ ಈ ಪ್ರವಾಸೋದ್ಯಮ- ಹೋಟೆಲ್ ಸ್ಟಾಕ್ ಹೂಡಿಕೆದಾರರಿಗೆ  ದೊಡ್ಡ ಮಟ್ಟದ ಲಾಭ ತಂದು ಕೊಡಬಲ್ಲದು.

ಹಾಗೆಂದ ಮಾತ್ರಕ್ಕೆ ನೀವು ಮುಟ್ಟಿದ ಸ್ಟಾಕ್ ಗಳೆಲ್ಲಾ  ನಿಮಗೆ ಲಾಭ ತಂದು ಕೊಡಲಾರದು. ತಜ್ಞರ ಜೊತೆಗೆ ಚರ್ಚಿಸಿ ಒಳ್ಳೆ ಸ್ಟಾಕ್ ಗಳಲ್ಲಿ ಹೂಡಿಕೆ ಮಾಡಿ, ಶ್ರೀಮಂತರಾಗಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?