ವಿಪ್ರೋ : ಬೋನಸ್ ಷೇರು ಘೋಷಣೆ ಸಾಧ್ಯತೆ 


ಸದ್ಯಕ್ಕೆ ಅತ್ಯಂತ ಅಗ್ಗದ ದರದಲ್ಲಿ ಲಭ್ಯವಿರುವ ಐಟಿ ಸ್ಟಾಕ್ ಗಳಲ್ಲಿ ಅತ್ಯಂತ ಅಗ್ಗದ ಸ್ಟಾಕ್ ಗಳಲ್ಲೊಂದು ವಿಪ್ರೋ ಸ್ಟಾಕ್. ಎರಡು ವರ್ಷಗಳ ಹಿಂದೆ ಏಳು ನೂರು ರೂಪಾಯಿ ದಾಟಿದ್ದ ಈ ಷೇರು ಈಗ 528ರ ಆಸುಪಾಸಿನಲ್ಲಿದೆ. 


ಎರಡು ವರ್ಷಗಳ ನಿರಾಸೆ ಬಳಿಕ ಎಲ್ಲಾ ಐಟಿ ಷೇರುಗಳಿಗೆ ಈಗ ಶುಕ್ರದೆಸೆ ಆರಂಭವಾದಂತಿದೆ. ಅದಕ್ಕೆ ವಿಪ್ರೋ ಸ್ಟಾಕ್ ಕೂಡಾ ಹೊರತಲ್ಲ. ಆರು ನೂರರ ಗಡಿಗೆ ಈ ಸ್ಟಾಕ್ ಇನ್ನೇನು ಕೆಲವೇ ದಿನಗಳಲ್ಲಿ ತಲುಪಲಿದೆ ಎನ್ನುವ ಸುದ್ದಿಯ  ಜೊತೆಗೆ ಇನ್ನೊಂದು ಶುಭ ಸುದ್ದಿ ಇಲ್ಲಿದೆ. 



ಇನ್ನು ಕೆಲವೇ ದಿನಗಳಲ್ಲಿ ವಿಪ್ರೋ ತನ್ನ ಷೇರುದಾರರಿಗೆ ಬೋನಸ್ ಷೇರು ನೀಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದೆ ತಿಂಗಳ   17ರಂದು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. 


ನಿಮಗೆ ತಾಳ್ಮೆ ಇದ್ದರೆ , ಈ  ಷೇರನ್ನು ನೀವು ಖರೀದಿಸಬಹುದಾಗಿದೆ. 


(ಸೂಚನೆ:  ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ.  ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು )


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

66,000 ಗಡಿ ದಾಟಿದ ಸೆನ್ಸೆಕ್ಸ್: ಮುಂದಿನ ನಿಲ್ದಾಣ 70,000?