ದೀರ್ಘಾವಧಿ : ಈ ನಾಲ್ಕು ಷೇರುಗಳು ನಿಮ್ಮ ಬತ್ತಳಿಕೆಯಲ್ಲಿರಲಿ!
ಅಮೆರಿಕಾ ಆರ್ಥಿಕ ಹಿಂಜರಿತದ ಗೊಂದಲ ಕಡಿಮೆಯಾದಂತಿದೆ. ಅಲ್ಲಿನ ಸುಮಾರು ಒಂದು ತಿಂಗಳ ಕಾಲ ಭೀತಿ ಹುಟ್ಟಿಸಿದ್ದ ಅಲ್ಲಿನ ತಜ್ಞರು ಈಗ ರಾಗ ಬದಲಿಸಿದಂತಿದೆ. ಈ ಹಿನ್ನಲೆಯಲ್ಲಿ ಸದ್ಯಕ್ಕೆ ಷೇರು ಮಾರುಕಟ್ಟೆಯಲ್ಲಿ ನಿರಾತಂಕವಾಗಿ ನೀವು ಹೂಡಿಕೆ ಮಾಡಬಹುದಾಗಿದೆ.
ಷೇರು ಮಾರುಕಟ್ಟೆಯಲ್ಲಿ ಕಳೆದ ತಿಂಗಳ "ರಕ್ತದೋಕುಳಿ" ಬಳಿಕ ಕೆಲವು ಉತ್ತಮ ಸ್ಟಾಕ್ ಗಳು ಅಗ್ಗದ ಬೆಲೆಗೆ ಈಗ ಲಭ್ಯವಿದೆ. ಮುಂದಿನ ಕೆಲವು ವಾರಗಳಲ್ಲಿ ಈ ಷೇರುಗಳು ನಿಮಗೆ ದೊಡ್ಡ ಲಾಭ ತಂದುಕೊಡಬಲ್ಲವು.
ಐಡಿಬಿಐ ಬ್ಯಾಂಕ್ ಸ್ಟಾಕ್: ಫೈನಾನ್ಸಿಯಲ್ ಎಕ್ಸ್ ಪ್ರೆಸ್ ಪ್ರಕಾರ, ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಈ ಬ್ಯಾಂಕ್ ನ ವರ್ಚುವಲ್ ಡೇಟಾ ರೂಮ್ ಅನ್ನು ಖಾಸಗಿ ಹೂಡಿಕೆದಾರರ ಪರಿಶೀಲನೆಗೆ ತೆರೆಯುವ ಸಾಧ್ಯತೆ ಇದೆ. ರಾಜಕೀಯ ಪಲ್ಲಟಗಳು ಏನೇ ಇರಲಿ, ಈ ಬ್ಯಾಂಕ್ ನ ಖಾಸಗೀಕರಣ ಬಹುತೇಕ ಖಚಿತವಾಗಿದೆ. ಮುಂದಿನ ಆರು ತಿಂಗಳಿನಲ್ಲಿ ಐಡಿಬಿಐ ಬ್ಯಾಂಕ್ ಸ್ಟಾಕ್ ನಿಮ್ಮ ಹೂಡಿಕೆಯನ್ನು ಎರಡು ಪಟ್ಟು ಮಾಡುವ ಸಾಧ್ಯತೆ ಇದೆ.
ಹುಡ್ಕೋ ಷೇರು: ಜುಲೈ 12ರಂದು 354 ರುಪಾಯಿಗೆ ತಲುಪಿದ್ದ ಹುಡ್ಕೋ ಷೇರು ಈಗ ಸುಮಾರು ನೂರು ರೂಪಾಯಿಗೂ ಮಿಕ್ಕಿ ಕುಸಿದಿದೆ. ಈ ಕಂಪನಿಯ ಬಗ್ಗೆ ಒಳ್ಳೆ ಸುದ್ದಿಗಳು ಬರುತ್ತಿದ್ದರೂ, ಲಾಭ ಪ್ರಮಾಣ ಹೆಚ್ಚುತ್ತಿದ್ದರೂ, ಷೇರು ಬೆಲೆ ಕುಸಿಯುತ್ತಿರುವುದು ಎಲ್ಲರಿಗು ಆಶ್ಚರ್ಯ ಹುಟ್ಟಿಸಿದೆ. ಮಾರುಕಟ್ಟೆ ಪರಿಣಿತರ ಪ್ರಕಾರ ಸದ್ಯದಲ್ಲೇ ಇದರ ಷೇರು ಬೆಲೆ 330ಕ್ಕೆ ಏರಬಹುದು.
ಎಚ್ ಎ ಎಲ್ : ಜುಲೈ 9ರಂದು 5,675 ರುಪಾಯಿಗೆ ಏರಿಕೆ ಕಂಡಿದ್ದ, ರಕ್ಷಣಾ ಕ್ಷೇತ್ರದ ದೈತ್ಯ ಎಚ್ ಎ ಎಲ್ ಷೇರು ಬೆಲೆ ಈಗ ಸುಮಾರು ಒಂದು ಸಾವಿರಷ್ಟು ಕಡಿಮೆ ಆಗಿದೆ. ಡಿಸೆಂಬರ್ ವೇಳೆಗೆ ಸಂಸ್ಥೆಗೆ ಕೇಂದ್ರ ಸರಕಾರ ಮಹಾರತ್ನ ಸ್ಥಾನಮಾನ ಕೊಡುವ ಸಾಧ್ಯತೆ ಇದೆ. ಇನ್ನು ವಾಯುಪಡೆ ಜೊತೆಗಿನ ಹೊಸ ಒಪ್ಪಂದಗಳು ಈ ಸಂಸ್ಥೆಯ ಷೇರು ಬೆಳೆಯನ್ನು ಸುಮಾರು ಏಳು ಸಾವಿರದ ಅಂಚಿಗೆ ಕೊಂಡೊಯ್ಯಬಲ್ಲದು ಎನ್ನುತ್ತಾರೆ ತಜ್ಞರು. ಹೀಗಾಗಿ, ದೀರ್ಘಾವಧಿ ಹೂಡಿಕೆಗೆ ಈ ಸ್ಟಾಕ್ ಡಿ ಬೆಸ್ಟ್ ಷೇರು .
ಬಿಇಎಲ್ ಸ್ಟಾಕ್: ರಕ್ಷಣಾ ಕ್ಷೇತ್ರದ ಇನ್ನೊಂದು ಸಾರ್ವಜನಿಕ ಸ್ವಾಮ್ಯದ ಸಂಸ್ಥೆ ಬಿಇಎಲ್ ಸ್ಟಾಕ್ ತನ್ನ ೫೨ ವಾರಗಳ ಅತ್ಯಧಿಕ ಬೆಳೆಯಿಂದ ಸುಮಾರು 80 ರೂಪಾಯಿಯಷ್ಟು ಕುಸಿದಿದೆ. ಸಂಸ್ಥೆಗೆ ರಪ್ತು ಸೇರಿದಂತೆ ಆರ್ಡರ್ ಫ್ಲೋ ನಿರಂತರವಾಗಿದ್ದರೂ, ಷೇರು ಬೆಲೆ ಕುಸಿತ ಕಾಣುತ್ತಿದೆ. ಇದು ಹೂಡಿಕೆದಾರರಿಗೆ ಈ ಷೇರುಗಳನ್ನು ಖರೀದಿಸಲು ಅತ್ಯುತ್ತಮ ಅವಕಾಶ ದೊರಕಿಸಿಕೊಟ್ಟಿದೆ.
(ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ