ವಿಪ್ರೋ : ಬೋನಸ್ ಷೇರು ಘೋಷಣೆ ಸಾಧ್ಯತೆ ಸದ್ಯಕ್ಕೆ ಅತ್ಯಂತ ಅಗ್ಗದ ದರದಲ್ಲಿ ಲಭ್ಯವಿರುವ ಐಟಿ ಸ್ಟಾಕ್ ಗಳಲ್ಲಿ ಅತ್ಯಂತ ಅಗ್ಗದ ಸ್ಟಾಕ್ ಗಳಲ್ಲೊಂದು ವಿಪ್ರೋ ಸ್ಟಾಕ್. ಎರಡು ವರ್ಷಗಳ ಹಿಂದೆ ಏಳು ನೂರು ರೂಪಾಯಿ ದಾಟಿದ್ದ ಈ ಷೇರು ಈಗ 528ರ ಆಸುಪಾಸಿನಲ್ಲಿದೆ. ಎರಡು ವರ್ಷಗಳ ನಿರಾಸೆ ಬಳಿಕ ಎಲ್ಲಾ ಐಟಿ ಷೇರುಗಳಿಗೆ ಈಗ ಶುಕ್ರದೆಸೆ ಆರಂಭವಾದಂತಿದೆ. ಅದಕ್ಕೆ ವಿಪ್ರೋ ಸ್ಟಾಕ್ ಕೂಡಾ ಹೊರತಲ್ಲ. ಆರು ನೂರರ ಗಡಿಗೆ ಈ ಸ್ಟಾಕ್ ಇನ್ನೇನು ಕೆಲವೇ ದಿನಗಳಲ್ಲಿ ತಲುಪಲಿದೆ ಎನ್ನುವ ಸುದ್ದಿಯ ಜೊತೆಗೆ ಇನ್ನೊಂದು ಶುಭ ಸುದ್ದಿ ಇಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ವಿಪ್ರೋ ತನ್ನ ಷೇರುದಾರರಿಗೆ ಬೋನಸ್ ಷೇರು ನೀಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದೆ ತಿಂಗಳ 17ರಂದು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ನಿಮಗೆ ತಾಳ್ಮೆ ಇದ್ದರೆ , ಈ ಷೇರನ್ನು ನೀವು ಖರೀದಿಸಬಹುದಾಗಿದೆ. (ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು )
ಪೋಸ್ಟ್‌ಗಳು
ಅಕ್ಟೋಬರ್, 2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
- ಲಿಂಕ್ ಪಡೆಯಿರಿ
- ಇಮೇಲ್
- ಇತರ ಅಪ್ಲಿಕೇಶನ್ಗಳು
ನೆನಪಿಡಿ: ಈ ಸರಕಾರಿ ಸ್ಟಾಕ್ 1,200 ರೂಪಾಯಿಗೂ ಮಿಕ್ಕಿ ಕುಸಿದಿದೆ! ಕೇಂದ್ರ ಸರಕಾರ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತನ್ನ ೫೨ ವಾರಗಳ ಗರಿಷ್ಠ ಮಟ್ಟದಿಂದ ಸುಮಾರು 1,200 ರೂಪಾಯಿಗೂ ಹೆಚ್ಚು ಕುಸಿದಿದೆ. ಈಗ ಈ ಷೇರು ಮತ್ತೆ ಸುದ್ದಿಯಲ್ಲಿದೆ ಅದಕ್ಕೆ ಕಾರಣ ಇಷ್ಟೇ. ಶನಿವಾರ ಈ ನವರತ್ನ ಸಂಸ್ಥೆಯನ್ನು ಕೇಂದ್ರ ಸರಕಾರ ಮಹಾರತ್ನ ಸಂಸ್ಥೆಯಾಗಿ ಘೋಷಿಸಿದೆ. ಹೀಗಾಗಿ, ಸೋಮವಾರವೂ ಈ ಸಂಸ್ಥೆಯ ಷೇರು ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುವ ನಿರೀಕ್ಷೆ ಇದೆ. ದೇಶದ ೧೪ನೇ ಮಹಾರತ್ನವಾಗಿ ಘೋಷಣೆಯಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆಯ ಷೇರುಗಳು ಕಳೆದ ಆರು ತಿಂಗಳಲ್ಲಿ ಕುಸಿತದ ದಾರಿಯಲ್ಲಿದೆ. ಆದಾಯ, ಲಾಭ, ಹಾಗು ಶೂನ್ಯ ಸಾಲ ಹೀಗೆ ಎಲ್ಲವು ಧನಾತ್ಮಕವಾಗಿದ್ದರು ಈ ಷೇರುಗಳ ಕುಸಿತ ಎಲ್ಲ ಹೂಡಿಕೆದಾರರ ನೆಮ್ಮದಿ ಕಸಿದಿದೆ. ಸದ್ಯಕ್ಕೆ ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ ಇದಕ್ಕಿಂತ ಬೆಸ್ಟ್ ಸ್ಟಾಕ್ ಇನ್ನೊಂದಿಲ್ಲ. (ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆ ಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು )
- ಲಿಂಕ್ ಪಡೆಯಿರಿ
- ಇಮೇಲ್
- ಇತರ ಅಪ್ಲಿಕೇಶನ್ಗಳು
ದೀರ್ಘಾವಧಿ : ಈ ನಾಲ್ಕು ಷೇರು ಗಳು ನಿಮ್ಮ ಬತ್ತಳಿಕೆಯಲ್ಲಿರಲಿ! ಅಮೆರಿಕಾ ಆರ್ಥಿಕ ಹಿಂಜರಿತದ ಗೊಂದಲ ಕಡಿಮೆಯಾದಂತಿದೆ. ಅಲ್ಲಿನ ಸುಮಾರು ಒಂದು ತಿಂಗಳ ಕಾಲ ಭೀತಿ ಹುಟ್ಟಿಸಿದ್ದ ಅಲ್ಲಿನ ತಜ್ಞರು ಈಗ ರಾಗ ಬದಲಿಸಿದಂತಿದೆ. ಈ ಹಿನ್ನಲೆಯಲ್ಲಿ ಸದ್ಯಕ್ಕೆ ಷೇರು ಮಾರುಕಟ್ಟೆ ಯಲ್ಲಿ ನಿರಾತಂಕವಾಗಿ ನೀವು ಹೂಡಿಕೆ ಮಾಡಬಹುದಾಗಿದೆ. ಷೇರು ಮಾರುಕಟ್ಟೆ ಯಲ್ಲಿ ಕಳೆದ ತಿಂಗಳ "ರಕ್ತದೋಕುಳಿ" ಬಳಿಕ ಕೆಲವು ಉತ್ತಮ ಸ್ಟಾಕ್ ಗಳು ಅಗ್ಗದ ಬೆಲೆಗೆ ಈಗ ಲಭ್ಯವಿದೆ. ಮುಂದಿನ ಕೆಲವು ವಾರಗಳಲ್ಲಿ ಈ ಷೇರು ಗಳು ನಿಮಗೆ ದೊಡ್ಡ ಲಾಭ ತಂದುಕೊಡಬಲ್ಲವು. ಐಡಿಬಿಐ ಬ್ಯಾಂಕ್ ಸ್ಟಾಕ್: ಫೈನಾನ್ಸಿಯಲ್ ಎಕ್ಸ್ ಪ್ರೆಸ್ ಪ್ರಕಾರ, ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಈ ಬ್ಯಾಂಕ್ ನ ವರ್ಚುವಲ್ ಡೇಟಾ ರೂಮ್ ಅನ್ನು ಖಾಸಗಿ ಹೂಡಿಕೆದಾರರ ಪರಿಶೀಲನೆಗೆ ತೆರೆಯುವ ಸಾಧ್ಯತೆ ಇದೆ. ರಾಜಕೀಯ ಪಲ್ಲಟಗಳು ಏನೇ ಇರಲಿ, ಈ ಬ್ಯಾಂಕ್ ನ ಖಾಸಗೀಕರಣ ಬಹುತೇಕ ಖಚಿತವಾಗಿದೆ. ಮುಂದಿನ ಆರು ತಿಂಗಳಿನಲ್ಲಿ ಐಡಿಬಿಐ ಬ್ಯಾಂಕ್ ಸ್ಟಾಕ್ ನಿಮ್ಮ ಹೂಡಿಕೆಯನ್ನು ಎರಡು ಪಟ್ಟು ಮಾಡುವ ಸಾಧ್ಯತೆ ಇದೆ. ಹುಡ್ಕೋ ಷೇರು : ಜುಲೈ 12ರಂದು 354 ರುಪಾಯಿಗೆ ತಲುಪಿದ್ದ ಹುಡ್ಕೋ ಷೇರು ಈಗ ಸುಮಾರು ನೂರು ರೂಪಾಯಿಗೂ ಮಿಕ್ಕಿ ಕುಸಿದಿದೆ. ಈ ಕಂಪನಿಯ ಬಗ್ಗೆ ಒಳ್ಳೆ ಸುದ್ದಿಗಳು ಬರುತ್ತಿದ್ದರೂ, ಲಾಭ ಪ್ರಮಾಣ ಹೆಚ್ಚುತ್ತಿದ್ದರೂ, ಷೇರು ಬೆಲೆ ಕುಸಿಯುತ್ತಿರುವುದು ಎಲ್ಲರಿಗು ಆ
- ಲಿಂಕ್ ಪಡೆಯಿರಿ
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪ್ರತಿ ವೇದಾಂತ ಸ್ಟಾಕ್ ನಿಂದ ನೂರು ರೂಪಾಯಿ ಲಾಭ? ಸದ್ಯಕ್ಕೆ ಸುದ್ದಿಯಲ್ಲಿರುವ ಪ್ರಮುಖ ಷೇರು ವೇದಾಂತ. ಇಂದು ಕಂಪನಿ ಈ ಆರ್ಥಿಕ ವರ್ಷದ ನಾಲ್ಕನೇ ಡಿವಿಡೆಂಡ್ ಘೋಷಿಸುವ ಸಾಧ್ಯತೆ ಇದೆ. ಅದರ ಜೊತೆಗೆ ಇನ್ನೊಂದು ದೊಡ್ಡ ಸುದ್ದಿ ಈಗಷ್ಟೇ ಹೊರಬಿದ್ದಿದೆ. ಮಂಗಳವಾರ 497.80ಕ್ಕೆ ಮುಕ್ತಾಯಗೊಂಡಿದ್ದ ಈ ಸ್ಟಾಕ್ 600 ರುಪಾಯಿಗೆ ಏರಬಹುದು ಎಂಬ ವರದಿಯನ್ನು ಐಸಿಐಸಿಐ ಸೆಕ್ಯುರಿಟೀಸ್ ನೀಡಿದೆ. ಕಳೆದ ಮೂರೂ ತಿಂಗಳಲ್ಲಿ 24 ರೂಪಾಯಿ ಡಿವಿಡೆಂಡ್ ನೀಡಿರುವ ಕಂಪನಿ ಷೇರುಗಳನ್ನು ನೀವು ಲಾಂಗ್ ಟರ್ಮ್ ಹೂಡಿಕೆಗೆ ಖರೀದಿಸಬಹುದು.