ವಿಪ್ರೋ : ಬೋನಸ್ ಷೇರು ಘೋಷಣೆ ಸಾಧ್ಯತೆ ಸದ್ಯಕ್ಕೆ ಅತ್ಯಂತ ಅಗ್ಗದ ದರದಲ್ಲಿ ಲಭ್ಯವಿರುವ ಐಟಿ ಸ್ಟಾಕ್ ಗಳಲ್ಲಿ ಅತ್ಯಂತ ಅಗ್ಗದ ಸ್ಟಾಕ್ ಗಳಲ್ಲೊಂದು ವಿಪ್ರೋ ಸ್ಟಾಕ್. ಎರಡು ವರ್ಷಗಳ ಹಿಂದೆ ಏಳು ನೂರು ರೂಪಾಯಿ ದಾಟಿದ್ದ ಈ ಷೇರು ಈಗ 528ರ ಆಸುಪಾಸಿನಲ್ಲಿದೆ. ಎರಡು ವರ್ಷಗಳ ನಿರಾಸೆ ಬಳಿಕ ಎಲ್ಲಾ ಐಟಿ ಷೇರುಗಳಿಗೆ ಈಗ ಶುಕ್ರದೆಸೆ ಆರಂಭವಾದಂತಿದೆ. ಅದಕ್ಕೆ ವಿಪ್ರೋ ಸ್ಟಾಕ್ ಕೂಡಾ ಹೊರತಲ್ಲ. ಆರು ನೂರರ ಗಡಿಗೆ ಈ ಸ್ಟಾಕ್ ಇನ್ನೇನು ಕೆಲವೇ ದಿನಗಳಲ್ಲಿ ತಲುಪಲಿದೆ ಎನ್ನುವ ಸುದ್ದಿಯ ಜೊತೆಗೆ ಇನ್ನೊಂದು ಶುಭ ಸುದ್ದಿ ಇಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ವಿಪ್ರೋ ತನ್ನ ಷೇರುದಾರರಿಗೆ ಬೋನಸ್ ಷೇರು ನೀಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದೆ ತಿಂಗಳ 17ರಂದು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ನಿಮಗೆ ತಾಳ್ಮೆ ಇದ್ದರೆ , ಈ ಷೇರನ್ನು ನೀವು ಖರೀದಿಸಬಹುದಾಗಿದೆ. (ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು )
ಪೋಸ್ಟ್‌ಗಳು
Stock
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ನೆನಪಿಡಿ: ಈ ಸರಕಾರಿ ಸ್ಟಾಕ್ 1,200 ರೂಪಾಯಿಗೂ ಮಿಕ್ಕಿ ಕುಸಿದಿದೆ! ಕೇಂದ್ರ ಸರಕಾರ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತನ್ನ ೫೨ ವಾರಗಳ ಗರಿಷ್ಠ ಮಟ್ಟದಿಂದ ಸುಮಾರು 1,200 ರೂಪಾಯಿಗೂ ಹೆಚ್ಚು ಕುಸಿದಿದೆ. ಈಗ ಈ ಷೇರು ಮತ್ತೆ ಸುದ್ದಿಯಲ್ಲಿದೆ ಅದಕ್ಕೆ ಕಾರಣ ಇಷ್ಟೇ. ಶನಿವಾರ ಈ ನವರತ್ನ ಸಂಸ್ಥೆಯನ್ನು ಕೇಂದ್ರ ಸರಕಾರ ಮಹಾರತ್ನ ಸಂಸ್ಥೆಯಾಗಿ ಘೋಷಿಸಿದೆ. ಹೀಗಾಗಿ, ಸೋಮವಾರವೂ ಈ ಸಂಸ್ಥೆಯ ಷೇರು ದೊಡ್ಡ ಮಟ್ಟದಲ್ಲಿ ಏರಿಕೆ ಕಾಣುವ ನಿರೀಕ್ಷೆ ಇದೆ. ದೇಶದ ೧೪ನೇ ಮಹಾರತ್ನವಾಗಿ ಘೋಷಣೆಯಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಸಂಸ್ಥೆಯ ಷೇರುಗಳು ಕಳೆದ ಆರು ತಿಂಗಳಲ್ಲಿ ಕುಸಿತದ ದಾರಿಯಲ್ಲಿದೆ. ಆದಾಯ, ಲಾಭ, ಹಾಗು ಶೂನ್ಯ ಸಾಲ ಹೀಗೆ ಎಲ್ಲವು ಧನಾತ್ಮಕವಾಗಿದ್ದರು ಈ ಷೇರುಗಳ ಕುಸಿತ ಎಲ್ಲ ಹೂಡಿಕೆದಾರರ ನೆಮ್ಮದಿ ಕಸಿದಿದೆ. ಸದ್ಯಕ್ಕೆ ನೀವು ದೀರ್ಘಾವಧಿಯ ಹೂಡಿಕೆದಾರರಾಗಿದ್ದರೆ ಇದಕ್ಕಿಂತ ಬೆಸ್ಟ್ ಸ್ಟಾಕ್ ಇನ್ನೊಂದಿಲ್ಲ. (ಸೂಚನೆ: ಷೇರು ಬೆಲೆಗಳು ಸ್ಟಾಕ್ ಮಾರುಕಟ್ಟೆ ಯ ಏರಿಳಿತ ಅವಲಂಬಿಸಿರುತ್ತದೆ. ಈ ಲೇಖನ ತಜ್ಞರ ವಿಶ್ಲೇಷಣೆ ಆಧರಿಸಿದ್ದಾಗಿದೆ. ಹೂಡಿಕೆದಾರರು, ತಜ್ಞರೊಂದಿಗೆ ಸಮಾಲೋಚಿಸಿ, ಹೂಡಿಕೆ ನಿರ್ಧಾರ ತೆಗೆದುಕೊಳ್ಳಬೇಕು )
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ದೀರ್ಘಾವಧಿ : ಈ ನಾಲ್ಕು ಷೇರು ಗಳು ನಿಮ್ಮ ಬತ್ತಳಿಕೆಯಲ್ಲಿರಲಿ! ಅಮೆರಿಕಾ ಆರ್ಥಿಕ ಹಿಂಜರಿತದ ಗೊಂದಲ ಕಡಿಮೆಯಾದಂತಿದೆ. ಅಲ್ಲಿನ ಸುಮಾರು ಒಂದು ತಿಂಗಳ ಕಾಲ ಭೀತಿ ಹುಟ್ಟಿಸಿದ್ದ ಅಲ್ಲಿನ ತಜ್ಞರು ಈಗ ರಾಗ ಬದಲಿಸಿದಂತಿದೆ. ಈ ಹಿನ್ನಲೆಯಲ್ಲಿ ಸದ್ಯಕ್ಕೆ ಷೇರು ಮಾರುಕಟ್ಟೆ ಯಲ್ಲಿ ನಿರಾತಂಕವಾಗಿ ನೀವು ಹೂಡಿಕೆ ಮಾಡಬಹುದಾಗಿದೆ. ಷೇರು ಮಾರುಕಟ್ಟೆ ಯಲ್ಲಿ ಕಳೆದ ತಿಂಗಳ "ರಕ್ತದೋಕುಳಿ" ಬಳಿಕ ಕೆಲವು ಉತ್ತಮ ಸ್ಟಾಕ್ ಗಳು ಅಗ್ಗದ ಬೆಲೆಗೆ ಈಗ ಲಭ್ಯವಿದೆ. ಮುಂದಿನ ಕೆಲವು ವಾರಗಳಲ್ಲಿ ಈ ಷೇರು ಗಳು ನಿಮಗೆ ದೊಡ್ಡ ಲಾಭ ತಂದುಕೊಡಬಲ್ಲವು. ಐಡಿಬಿಐ ಬ್ಯಾಂಕ್ ಸ್ಟಾಕ್: ಫೈನಾನ್ಸಿಯಲ್ ಎಕ್ಸ್ ಪ್ರೆಸ್ ಪ್ರಕಾರ, ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಈ ಬ್ಯಾಂಕ್ ನ ವರ್ಚುವಲ್ ಡೇಟಾ ರೂಮ್ ಅನ್ನು ಖಾಸಗಿ ಹೂಡಿಕೆದಾರರ ಪರಿಶೀಲನೆಗೆ ತೆರೆಯುವ ಸಾಧ್ಯತೆ ಇದೆ. ರಾಜಕೀಯ ಪಲ್ಲಟಗಳು ಏನೇ ಇರಲಿ, ಈ ಬ್ಯಾಂಕ್ ನ ಖಾಸಗೀಕರಣ ಬಹುತೇಕ ಖಚಿತವಾಗಿದೆ. ಮುಂದಿನ ಆರು ತಿಂಗಳಿನಲ್ಲಿ ಐಡಿಬಿಐ ಬ್ಯಾಂಕ್ ಸ್ಟಾಕ್ ನಿಮ್ಮ ಹೂಡಿಕೆಯನ್ನು ಎರಡು ಪಟ್ಟು ಮಾಡುವ ಸಾಧ್ಯತೆ ಇದೆ. ಹುಡ್ಕೋ ಷೇರು : ಜುಲೈ 12ರಂದು 354 ರುಪಾಯಿಗೆ ತಲುಪಿದ್ದ ಹುಡ್ಕೋ ಷೇರು ಈಗ ಸುಮಾರು ನೂರು ರೂಪಾಯಿಗೂ ಮಿಕ್ಕಿ ಕುಸಿದಿದೆ. ಈ ಕಂಪನಿಯ ಬಗ್ಗೆ ಒಳ್ಳೆ ಸುದ್ದಿಗಳು ಬರ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಪ್ರತಿ ವೇದಾಂತ ಸ್ಟಾಕ್ ನಿಂದ ನೂರು ರೂಪಾಯಿ ಲಾಭ? ಸದ್ಯಕ್ಕೆ ಸುದ್ದಿಯಲ್ಲಿರುವ ಪ್ರಮುಖ ಷೇರು ವೇದಾಂತ. ಇಂದು ಕಂಪನಿ ಈ ಆರ್ಥಿಕ ವರ್ಷದ ನಾಲ್ಕನೇ ಡಿವಿಡೆಂಡ್ ಘೋಷಿಸುವ ಸಾಧ್ಯತೆ ಇದೆ. ಅದರ ಜೊತೆಗೆ ಇನ್ನೊಂದು ದೊಡ್ಡ ಸುದ್ದಿ ಈಗಷ್ಟೇ ಹೊರಬಿದ್ದಿದೆ. ಮಂಗಳವಾರ 497.80ಕ್ಕೆ ಮುಕ್ತಾಯಗೊಂಡಿದ್ದ ಈ ಸ್ಟಾಕ್ 600 ರುಪಾಯಿಗೆ ಏರಬಹುದು ಎಂಬ ವರದಿಯನ್ನು ಐಸಿಐಸಿಐ ಸೆಕ್ಯುರಿಟೀಸ್ ನೀಡಿದೆ. ಕಳೆದ ಮೂರೂ ತಿಂಗಳಲ್ಲಿ 24 ರೂಪಾಯಿ ಡಿವಿಡೆಂಡ್ ನೀಡಿರುವ ಕಂಪನಿ ಷೇರುಗಳನ್ನು ನೀವು ಲಾಂಗ್ ಟರ್ಮ್ ಹೂಡಿಕೆಗೆ ಖರೀದಿಸಬಹುದು.
ಈ ಸರಕಾರಿ ಷೇರು ನಿಮ್ಮ ಭಾಗ್ಯ ಬದಲಿಸಬಹುದು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಹುಡ್ಕೋ (ಹೌಸಿಂಗ್ ಎಂಡ್ ಅರ್ಬನ್ ಡೆವಲಪ್ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ ) ಷೇರು ಈಗ ಅತಿ ಅಗ್ಗದಲ್ಲಿ ಲಭ್ಯವಿದೆ. ತಜ್ಞರ ಪ್ರಕಾರ ಈ ಷೇರು ನಿಮ್ಮ ಭಾಗ್ಯ ಬದಲಾಯಿಸಬಹುದು. ಪ್ರಸ್ತುತ ೬೭ ರುಪಾಯಿಗೆ ಈ ಷೇರು ಲಭ್ಯವಿದೆ. ಮುಂದಿನ ಆರು ತಿಂಗಳಿನಲ್ಲಿ ಈ ಷೇರು ೮೬ರ ಗಡಿ ತಲುಪಬಹುದು ಎನ್ನುತ್ತಾರೆ ತಜ್ಞರು. ಇನ್ನು ರಿಸ್ಕ್ ಇಲ್ಲದೆ ಹೂಡಿಕೆ ಮಾಡಲು ತಜ್ಞರು ನೀಡುತ್ತಿರುವ ಷೇರು ಸಲಹೆ ಗಳೆಂದರೆ ಬಿಇಎಲ್ , ಗೈಲ್, ಹಾಗು ಬಿಎಚ್ ಇ ಎಲ್ ಷೇರುಗಳನ್ನು. ಈ ಷೇರುಗಳು ಸರಕಾರೀ ಸಂಸ್ಥೆಗಳದಾಗಿದ್ದು, ರಿಸ್ಕ್ ಅತಿ ಕಡಿಮೆ ಎನ್ನುತ್ತಾರೆ ತಜ್ಞರು.
ನಿಖರವಾದ ನಮ್ಮ ವಿಶ್ಲೇಷಣೆ: 100 ರೂಪಾಯಿ ಗಡಿದಾಟಿದ ಬಿಎಚ್ಇಎಲ್ ಷೇರು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ಕೇಂದ್ರ ಸರಕಾರ ಸ್ವಾಮ್ಯದ ಬಿಎಚ್ಇಎಲ್ ಷೇರು 100 ರೂಪಾಯಿ ಗಡಿದಾಟಿದೆ. ಜುಲೈ ೨ನೇ ವಾರದಲ್ಲೇ ನಾವು ಈ ಬಗ್ಗೆ ನಿಖರ ವಿಶ್ಲೇಷಣೆ ನಡೆಸಿದ್ದೆವು. ತಜ್ಞರ ಪ್ರಕಾರ ಇದು ೧೩೦ ರ ಗಡಿ ದಾಟುವ ಸಾಧ್ಯತೆ ಇದೆ. 1.50 ಲಕ್ಷ ಕೋಟಿ ಆರ್ಡರ್ ಬುಕ್ ಹೊಂದಿರುವ ಕೇಂದ್ರ ಸರಕಾರ ಸ್ವಾಮ್ಯದ ಈ ಸಂಸ್ಥೆ ಈಗ ಎಲ್ಲೆಡೆ ಸುದ್ದಿಯಲ್ಲಿದೆ. ಈಗ ಮೋದಿ ನೇತೃತ್ವದ ಸರಕಾರ ತನ್ನೆಲ್ಲಾ ಸಂಸ್ಥೆಗಳ ಸೇವೆಯಲ್ಲಿ ದೊಡ್ಡ ಮಟ್ಟದ ಸುಧಾರಣೆ ತರುತ್ತಿರುವುದರಿಂದ ಈ ಸಂಸ್ಥೆಯ ಷೇರು ಖರೀದಿಗೆ ಈಗ ಸಕಾಲ. ೨-೩ ವರ್ಷಗಳಲ್ಲಿ ಈ ಷೇರು ಎರಡು ಪಟ್ಟು ಆಗ ಬಹುದೆಂಬ ನಿರೀಕ್ಷೆ ಇದೆ. ನಮ್ಮ ಹಿಂದಿನ ವಿಶ್ಲೇಷಣೆಯ ಲಿಂಕ್ ಈ ಕೆಳಗಿನಂತಿದೆ. https://stocknewsinkannada.blogspot.com/2023/07/blog-post_18.html ಇನ್ನು ಹೂಡಿಕೆದಾರರಿಗೆ ಇನ್ನೊಂದು ಅತ್ಯುತ್ತಮ ಷೇರು ಬಿಇಎಲ್. ಈ ಬಾರಿಯ ತ್ರೈಮಾಸಿಕ ಫಲಿತಾಂಶ ಕೂಡಾ ಅತ್ಯುತ್ತಮವಾಗಿ ಬಂದಿರುವ ಹಿನ್ನಲೆಯಲ್ಲಿ ಈ ಷೇರು ಕೂಡಾ ಖರೀದಿಗೆ ಈಗ ಸಕಾಲ ಎನ್ನುತ್ತಾರೆ ತಜ್ಞರು .
ವಿಪ್ರೋ ಷೇರುಗಳಿಗೆ ಮತ್ತೆ ಒಳ್ಳೆ ದೆಸೆ : 450 ರೂಪಾಯಿ ಗುರಿ ನೀಡಿದ್ದಾರೆ ತಜ್ಞರು
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
ವಿಪ್ರೋ ಷೇರುಗಳಿಗೆ ಮತ್ತೆ ಒಳ್ಳೆ ದೆಸೆ : 450 ರೂಪಾಯಿ ಗುರಿ ನೀಡಿದ್ದಾರೆ ತಜ್ಞರು ಇನ್ಫೋಸಿಸ್ ನಂತೆ ಕನ್ನಡಿಗರ ಮನೆ ಮಾತಾಗಿರುವ ಇನ್ನೊಂದು ಐಟಿ ಸಂಸ್ಥೆ ಎಂದರೆ ಅದು ವಿಪ್ರೋ. ಆದರೆ ಕಳೆದ ಒಂದೂವರೆ ವರ್ಷ, ಈ ಕಂಪನಿಯ ಷೇರು ಹೂಡಿಕೆದಾರರಿಗೆ ಒಂದಿಷ್ಟು ನಷ್ಟ ಉಂಟಾಗಿತ್ತು. ೩೫೦ ರೂಪಾಯಿಯವರೆಗೆ ಈ ಕಂಪನಿ ಷೇರು ಕುಸಿದಿದ್ದರಿಂದ ಒಂದಿಷ್ಟು ಆತಂಕ ಸೃಷ್ಟಿಯಾಗಿತ್ತು. ಆದರೆ ಈ ಸ್ಟಾಕ್ ಗೆ ಮತ್ತೆ ಈಗ ಗುರು ದೆಸೆ ಆರಂಭವಾದಂತಿದೆ. ತಜ್ಞರು ಈ ಷೇರು ೪೫೦ರ ಗಡಿ ದಾಟ ಬಹುದು ಎಂಬ ವಿಶ್ಲೇಷಣೆ ನೀಡಿದ್ದಾರೆ. ದೀರ್ಘಾವಧಿಯಲ್ಲಿ ಈ ಷೇರುಗಳು ದ್ವಿಗುಣಗೊಂಡರೂ ಆಶ್ಚರ್ಯವಿಲ್ಲ. ಇನ್ನು ತಜ್ಞರು ಇನ್ಫೋಸಿಸ್ , ಸೆಸ್ಕ್, ಎಸ್ ಬಿ ಐ, ಹಾಗು ಎನ್ ಎಂ ಡಿ ಸಿ ಷೇರುಗಳ ಬಗ್ಗೆ ಕೂಡಾ ಆಶಾವಾದ ವ್ಯಕ್ತ ಪಡಿಸಿದ್ದಾರೆ.